ಮೈಸೂರು: ಮೈಸೂರು ಫೆಸ್ಟ್ -2024 ಕಾರ್ಯಕ್ರಮವನ್ನು ಜ.26 ರಿಂದ ಮೂರು ದಿನಗಳ ಕಾಲ ಮೈಸೂರು ವಿವಿ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗುತ್ತಿದೆ
ಎಂದು ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ ತಿಳಿಸಿದರು.
ಮೈಸೂರಿನ ಕಲೆ, ಸಂಸ್ಕೃತಿ ಮತ್ತು ಪ್ರವಾಸಿತಾಣಗಳ ಬಗ್ಗೆ ಪ್ರವಾಸಿಗರಿಗೆ ತಿಳಿಸಲು ಇದು ಒಂದು ಉತ್ತಮ ವೇದಿಕೆಯಾಗಲಿದೆ ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆಯು ಮೈಸೂರು ಫೆಸ್ಟ್-2024 ಕಾರ್ಯಕ್ರಮ ಸಿದ್ದತೆ ಕುರಿತು ನೇರ ಪಾಲುದಾರರೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಜನವರಿ 26,27,28 ಮೂರು ದಿನಗಳ ಕಾಲ ಮೈಸೂರು ಫೆಸ್ಟ್ ನಡೆಯಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಜೊತೆಗೆ ಜನವರಿ 26 ರಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ಇರುವ ಕ್ಲಾಕ್ ಟವರ್
ರಸ್ತೆ ಬದಿ ಚಿತ್ರಸಂತೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಚಿತ್ರಕಲಾಸ್ಪರ್ಧೆಯೂ ಇದ್ದು, ಪ್ರಾವಿಣ್ಯತೆ ಹೊಂದಿರುವ ಕಲಾವಿದರು ಹಾಗೂ ಫ್ರೌಡಶಾಲಾ ಮಕ್ಕಳು ಸ್ಫರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಬೆಳಗ್ಗೆ 11 ಗಂಟೆಯಿoದ ಸಂಜೆ 5 ಗಂಟೆ ವರೆಗೆ ಸ್ಥಳೀಯ ಕಲಾತಂಡಗಳಿoದ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಮೈಸೂರು ಫೆಸ್ಟ್-2024 ಅನ್ನು ಮೈಸೂರು ವಿಶ್ವವಿದ್ಯಾಲಯದ ಬಯಲು ರಂಗಮoದಿರದಲ್ಲಿ ಜನವರಿ 27 ರಂದು
ಸಂಜೆ 5.30 ಕ್ಕೆ ಚಾಲನೆ ನೀಡಲಾಗುವುದು
ಜಿಲ್ಲಾ ಉಸ್ತವಾರಿ ಸಚಿವರ, ಪ್ರವಾಸೋದ್ಯಮ ಸಚಿವರು ಮತ್ತು ಜನಪ್ರತಿನಿಧಿಗಳು ಉದ್ಘಾಟಿಸಲಿದ್ದಾರೆ.
ಸಂಜೆ 6.30 ರ ನಂತರ ಎರಡು ದಿನಗಳ ಕಾಲ ವಿವಿಧ ಕಲಾ ತಂಡಗಳು ನಾಟ್ಯ ಕಲಾಪ್ರಾಕಾರಗಳ ನಡೆಸಿಕೊಡುವರು, ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಬಯಲು ರಂಗಮಂದಿರಕ್ಕೆ ಹೊಂದಿಕೊಂಡಂತೆ ಇರುವ ಸ್ಥಳಗಳಲ್ಲಿ ವಿವಿಧ ಉದ್ಯಮಗಳ ಮಳಿಗೆಗಳನ್ನು ಆಯೋಜಿಸಲಾಗುವುದು.
ಮೈಸೂರಿನ ವಿಶೇಷ ಖಾದ್ಯಗಳು, ಸ್ಥಳೀಯ ಉತ್ಪನ್ನಗಳು ಹಾಗೂ ಮೈಸೂರಿನ ವಿಶೇಷವಾದ ತಿಂಡಿ ತಿನಿಸುಗಳ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ
ಅಲಂಕಾರ ಸಾಮಗ್ರಿ, ಮಕ್ಕಳ ಆಟಿಕೆಗಳು, ಆರೋಗ್ಯ ಸಂಬoಧಿ ಸ್ಟಾಲ್‌ಗಳಿಗೆ ಬ್ರ‍್ಯಾಂಡ್ ಮೈಸೂರು ಫೆಸ್ಟ್ ನಲ್ಲಿ ಅವಕಾಶ ನೀಡಲಾಗುವುದು ಎಂದು ಮಾಹುತಿ ನೀಡಿದರು.
ಮೈಸೂರಿನ ಪ್ರಮುಖ ಪ್ರವಾಸಿ ಸ್ಥಳಗಳು, ಹೋಟೆಲ್, ವಿಮಾನ ನಿಲ್ದಾಣ, ರೈಲ್ವೆ ಹಾಗೂ ಮೈಸೂರಿನ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಸ್ವಯಂ ಪ್ರೇರಿತರಾಗಿ ಲೋಗೋವನ್ನು ಪ್ರದರ್ಶಿಸಲು ಮುಂದಾಗಬೇಕು ಎಂದು ಸವಿತಾ ಕರೆ ನೀಡಿದರು.
ಸಭೆಯಲ್ಲಿ ಹೋಟೆಲ್ ಮಾಲೀಕರ ಸಂಘದ ನಾರಾಯಣ ಗೌಡ, ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ ಅಧ್ಯಕ್ಷರಾದ ಪ್ರಶಾಂತ್, ಜಿಎಸ್ ಎಸ್ ಯೋಗ ಸಂಸ್ಧೆಯ ಅಧ್ಯಕ್ಷರಾದ ಶ್ರೀ ಹರಿ, ಚಾಲಕರ ಸಂಘದ ಅಧ್ಯಕ್ಷರಾದ ನಾಗರಾಜು, ಡಿ. ದೇವರಾಜು ಅರಸು ರಸ್ತೆ ಅಂಗಡಿ ಮಾಲೀಕರ ಹಾಗೂ ಬಾಡಿಗೆದಾರರ ಸಂಘದ ಅಧ್ಯಕ್ಷರಾದ ವೀರಭದ್ರ, ಅನುಮೋದಿತ ಮಾರ್ಗದರ್ಶಿ ಸಂಘಗಳ ಅಧ್ಯಕ್ಷರಾದ ಎಸ್.ಜೆ ಅಶೋಕ್ ಹಾಗೂ ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ದೇವರಾಜ್ ಹಾಗೂ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು.