-ಜಿ.ಆರ್. ಸತ್ಯಲಿಂಗರಾಜು
ಚಿತ್ರೀಕರಣ ಸಮಯದಲ್ಲೇ ಅನೇಕಾನೇಕ ಟ್ರಿಕ್ಸ್ ಮಾಡಬಹುದು.
ಅದರಲ್ಲಿ ಕೆಲವಷ್ಟನ್ನ ಎಡಿಟಿಂಗ್ ನಲ್ಲೂ ಮಾಡಬಹುದು. ಇದಕ್ಕೆ ಆಗುವ ವೆಚ್ಚ ಕೂಡ ಕಡಿಮೆ.
ಒಂದು ಫ್ರೇಮನ್ನ ಇನ್ನೊಂದು ಫ್ರೇಮ್ ಗೆ ಹೊಂದಿಸಿ, ಒಂದರಿಂದ ಒಂದಕ್ಕೆ ದಾಟಿಸುತ್ತಾ ಹೋಗುವುದಕ್ಕೆ transition (ಸ್ಥಿತ್ಯಂತಕ) ತಂತ್ರ ಎನ್ನಲಾಗುತ್ತೆ.
ಈ ತಂತ್ರದಲ್ಲಿ ಕೆಲ ಮುಖ್ಯಪ್ರಕಾರಗಳಿವೆ…
- ಛೇದ(cut): ಒಂದು ಚಿತ್ರಿಕೆ ತುದಿ, ಮುಂದಿನ ಚಿತ್ರಿಕೆ ತುದಿಗೆ ನೇರವಾಗಿ ಕೂಡಿಸುವುದರಿಂದ, ಒಂದು ದೃಶ್ಯ ಮಾಯವಾಗಿ ತಟ್ಟನೆ ಮತ್ತೊಂದು ದೃಶ್ಯ ಬರುವುದಕ್ಕೆ ಇದು ಸಹಕಾರಿ.
- ಕತ್ತಲಲ್ಲಿ ಲೀನ (fade out): ಒಂದು ಚಿತ್ರಿಕೆ ಕ್ರಮೇಣ ಮಸುಕಾಗುತ್ತಾ ತುದಿಯಲ್ಲದು ಕತ್ತಲಲ್ಲಿ ಲೀನವಾಗುವಂತೆ ಮಾಡಿ, ನಂತರದ ಫ್ರೇಮ್ ಆರಂಭವಾಗಲು ‘ವಿ’ ಆಕಾರದ ಗೆರೆ ಎಳೆದು ಸಂಕಲನ ಮಾಡಲಾಗುತ್ತಿತ್ತು.
- ಕತ್ತಲಿನಿಂದ ಮೂಡಿಕೆ(fade in): ಚಿತ್ರಿಕೆ ಮಸುಕು ಮಸುಕಾಗಿ ಆರಂಭವಾಗಿ ನಂತರ ಸ್ಪಷ್ಟತೆ ಪಡೆಯುತ್ತಾ ಹೋಗುವುದನ್ನ ಎಡಿಟಿಂಗ್ ನಲ್ಲು ಮಾಡಬಹುದು.