ಮೈಸೂರ ಅಂಗಡಿ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಇರಬೇಕು

ಮೈಸೂರು: ಮೈಸೂರಿನಲ್ಲಿರುವ ಎಲ್ಲಾ ಅಂಗಡಿ, ಮುಂಗಟ್ಟು, ವ್ಯಾಪಾರ ಮಳಿಗೆಗಳು, ಮಾಲ್ ಗಳು, ಖಾಸಗಿ ಕಚೇರಿಗಳು, ಶಾಲಾ-ಕಾಲೇಜು ಹಾಗೂ ಜಾಹೀರಾತು ಫಲಕಗಳು ಮತ್ತು ಎಲ್ಲಾ ರೀತಿಯ ನಾಮಫಲಕಗಳಲ್ಲಿ ಶೇ ೬೦ ಭಾಗ ಕನ್ನಡವೇ ಪ್ರಧಾನವಾಗಿರಬೇಕೆಂದು ಕರ್ನಾಟಕ ಸೇನಾಪಡೆ‌ ಸದಸ್ಯ ಒತ್ತಾಯಿಸಿದ್ದಾರೆ

ಈ ಬಗ್ಗೆ ಕೂಡಲೇ ಮೈಸೂರು ಮಹಾನಗರ ಪಾಲಿಕೆ ಕಟ್ಟುನಿಟ್ಟಾಗಿ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ ಇಂದು ಕರ್ನಾಟಕ ಸೇನಾಪಡೆ ವತಿಯಿಂದ ಮೈಸೂರು ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಕನ್ನಡ ಭಾಷೆಯೇ ಸಾರ್ವಭೌಮ ಭಾಷೆ, ಕನ್ನಡ ನಾಡಿನಲ್ಲಿ ಮೊದಲು ಕನ್ನಡ ಭಾಷೆಯನ್ನು ಪ್ರಧಾನವಾಗಿ ಬಳಸಬೇಕು. ಹಾಗೂ ಕನ್ನಡದಲ್ಲಿ ವ್ಯವಹರಿಸಬೇಕು,ಕನ್ನಡ ಭಾಷೆ ಕಲಿಯಬೇಕು ಇಲ್ಲದಿದ್ದರೆ ನಾವು ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಡಿಸೆಂಬರ್ 27ರಂದು ಬೆಂಗಳೂರಿನಲ್ಲಿ ಕರವೇ ನಾಮಫಲಕ ಮಹಾ ಅಭಿಯಾನವನ್ನು ಕೈಗೊಂಡಿತ್ತು ಅದರ ಹೋರಾಟದ ಮೇರೆಗೆ ರಾಜ್ಯ ಸರ್ಕಾರ ಈಗ ನಾಮಫಲಕಗಳಲ್ಲಿ ಶೇ ೬೦ ಕಡ್ಡಾಯ ಸುಗ್ರೀವಾಜ್ಞೆ ಹೊರಡಿಸಿದೆ.

3-4 ದಿನಗಳ ಹಿಂದೆ, ಶಿವಮೊಗ್ಗ, ಮಹಾನಗರ ಪಾಲಿಕೆ ಆಯುಕ್ತರು ಶಿವಮೊಗ್ಗ, ನಗರದ ಎಲ್ಲಾ ಅಂಗಡಿ, ಉದ್ದಿಮೆ ನಾಮಫಲಕ ಮತ್ತು ಜಾಹೀರಾತು ಫಲಕಗಳಲ್ಲಿ ಕಡ್ಡಾಯವಾಗಿ ಶೇ. ೬೦ ಭಾಗ ಕನ್ನಡ ಭಾಷೆ ಪ್ರಧಾನವಾಗಿ ಬಳಸಬೇಕು. ಈ ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದುಪಡಿಸಲಾಗುತ್ತದೆ ಎಂದು ಆದೇಶ ಹೊರಡಿಸಿದ್ದಾರೆ.

ಇದೇ‌ ಮಾದರಿಯನ್ನು ಮೈಸೂರು ಪಾಲಿಕೆ ಅನುಸರಿಸಬೇಕು,ಒಂದು ವೇಳೆ ಈ ಕೆಲಸ ಮಾಡದಿದ್ದರೆ, ಮತ್ತೆ ನಮ್ಮ ಸಂಘಟನೆ ಬೀದಿಗಿಳಿದು ಕನ್ನಡ ಬಳಸದ ನಾಮಪಲಕಗಳಿಗೆ ಮಸಿ ಬಳಿಯಲಾಗುವುದೆಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು.

ರಾಜ್ಯಾಧ್ಯಕ್ಷ ಸಿ ಜಿ ಗಂಗಾಧರ್, ಕೃಷ್ಣಯ್ಯ ಸಿ ಎಚ್, ಗೋಲ್ಡ್ ಸುರೇಶ್, ಪ್ರಭುಶಂಕರ್, ವಿಜಯೇಂದ್ರ, ಪ್ರಜೀಶ್ ಪಿ, ಸುನಿಲ್ ಅಗರ್ವಾಲ್, ಶಿವಲಿಂಗಯ್ಯ, ರವಿ ಒಲಂಪಿಯ, ಹನುಮಂತಯ್ಯ, ಶಿವನಾಯಕ್. ಅಂಬಾಅರಸ್, ಲಕ್ಷ್ಮಿ, ಭಾಗ್ಯಮ್ಮ, ನೇಹಾ, ಮಂಜುಳಾ, ಪದ್ಮ, ಶುಭಶ್ರೀ ಗೀತಾ ಗೌಡ, ಆರ್ ಮಹಾದೇವ, ಪುಷ್ಪವತಿ, ಸಮಯ ಮಂಜುಳಾ, ಜ್ಯೋತಿ, ಇಂದಿರಾ, ಎಳನೀರು ರಾಮಣ್ಣ, ಕೆಪಿ ನಾಗಣ್ಣ, ಅನಿಲ್, ನಂದಕುಮಾ‌ರ್, ಕುಮಾರ್ ಗೌಡ, ದರ್ಶನ್ ಗೌಡ, ನಂದಕುಮಾರ್. ರಾಧಾಕೃಷ್ಣ. ಪರಿಸರ ಚಂದ್ರು, ಆನಂದ, ದಿನೇಶ್, ಶ್ರೀನಿವಾಸ್, ಮಹದೇವ ಸ್ವಾಮಿ, ಹರೀಶ್, ಶಾಂತಕುಮಾರ್, ಪ್ರದೀಪ್ ದಿಲೀಪ್, ರವೀಶ್, ಗಣೇಶ್ ಪ್ರಸಾದ್, ಪ್ರಭಾಕರ, ಕೃಷ್ಣಮೂರ್ತಿ, ರಾಮನಾಯಕ್, ರಮೇಶ್, ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.