ಮಂಡ್ಯ: ಕೆ ಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವಿಧ್ಯಾರ್ಥಿನಿಯೊಬ್ಬಳು ನಿರ್ವಾಹಕಿಗೆ ಟಿಕೆಟ್ ಕೊಡಿ ಅಜ್ಜಿ ಎಂದದ್ದಕ್ಕೆ ಕಪಾಳಮೋಕ್ಷ ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ಟಿಕೆಟ್ ಕೊಡಿ ಅಜ್ಜಿ ಎಂದು ಕೇಳಿದ್ದಕ್ಕೆ ಸಿಟ್ಟಿಗೆದ್ದ ನಿರ್ವಾಹಕಿ ವಿದ್ಯಾರ್ಥಿನಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಕೆ.ಎಂ.ದೊಡ್ಡಿಯಿಂದ ಮಂಡ್ಯಕ್ಕೆ ತೆರಳುತ್ತಿದ್ದ ವಿದ್ಯಾರ್ಥಿನಿ ಕಾವ್ಯಶ್ರೀ
ಟಿಕೆಟ್ ಪಡೆಯುವಾಗ ನಿರ್ವಾಹಕಿ ಸೌಭಾಗ್ಯರನ್ನ ಅಜ್ಜಿ ಟಿಕೆಟ್ ಕೊಡಿ ಎಂದಿದ್ದಾರೆ.
ಇದರಿಂದ ಕೋಪಗೊಂಡ ನಿರ್ವಾಹಕಿ ಅಜ್ಜಿಯಂತೆ ಕಾಣುತ್ತೀನ ಎಂದು ವಿದ್ಯಾರ್ಥಿನಿ ಕೆನ್ನೆಗೆ ಭಾರಿಸಿದ್ದಾರೆ.
ಸ್ಥಳದಲ್ಲೇ ಬಸ್ ನಿಲ್ಲಿಸಿ ನಿರ್ವಾಹಕಿ ವಿರುದ್ಧ ವಿದ್ಯಾರ್ಥಿನಿ ದೂರು ನೀಡಿದ್ದಾಳೆ.
ಹಲ್ಲೆಗೊಳಗಾದ ವಿದ್ಯಾರ್ಥಿನಿಗೆ ಸಹ ಪ್ರಯಾಣಿಕರು ನೆರವಾಗಿದ್ದಾರೆ.
ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ನಿರ್ವಾಹಕಿ ವಿರುದ್ದ ಪ್ರಕರಣ ದಾಖಲಾಗಿದೆ.
ಈ ವೇಳೆ ಮಹಿಳಾ ಸಂಘಟನೆಯವರು ನಿರ್ವಾಹಕಿ ವಿರುದ್ದ ಕ್ರಮ ತೆಗೆದುಕೊಳ್ಳದಿದ್ದರೆ ಮಂಡ್ಯ ಡಿಪೋ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೂಡಲೆ ಕಪಾಲಮೋಕ್ಷ ಮಾಡಿದ ನಿರ್ವಾಹಕಿಯನ್ನು ಸಸ್ಪೆಂಡ್ ಮಾಡಬೇಕೆಂದು ಮಹಿಳಾ ಸಂಘಟನೆಯವರು ಒತ್ತಾಯಿಸಿದರು.