ಮೈಸೂರು: ಶ್ರೀರಾಮ ಸೇವಾ ಟ್ರಸ್ಟ್ ವತಿಯಿಂದ ಜ.22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯುತಿದ್ದು ಮೈಸೂರಿನಲ್ಲೂ ದೇವಾಲಯ ಸ್ವಚ್ಛತೆ ಹಾಗೂ ಪೂಜಾಕಾರ್ಯ ನೆರವೇರಿತು.
ಕೇಂದ್ರದ ಭಾರತೀಯ ಜನತಾ ಪಾರ್ಟಿ ಸೂಚನೆಯಂತೆ ಮೈಸೂರಿನಲ್ಲೂ ಪೂಜಾಕಾರ್ಯಗಳು ನೆರವೇರಿದವು.
ಮೊದಲು ಮೈಸೂರಿನ ಎಂ.ಜಿ.ರಸ್ತೆ, ಶ್ರೀಕಾಂತ ಶಾಲೆಯ ಬಳಿ ಇರುವ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ಶ್ರೀರಾಮ ಸೇವಾ ಸಮಿತಿ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸ್ವಚ್ಛತಾ ಕಾರ್ಯ ನೆರವೇರಿಸಿದರು.
ಪ್ರತಾಪ್ ಸಿಂಹ ಮತ್ತು ಶ್ರೀವತ್ಸ ಅವರು ಮೊದಲಿಗೆ ದೇವಾಲಯದ ಆವರಣದಲ್ಲಿದ್ದ ಗಿಡಗಂಟಿ,ಕಸವನ್ನೆಲ್ಲ ಗುಡಿಸಿ ತ್ಯಾಜ್ಯವನ್ನೆಲ್ಲ ಒಂದೆಡೆ ಪೇರಿಸಿ ಸ್ವಚ್ಛಪಡಿಸಿದರು
ಈ ವೇಳೆ ಕೋದಂಡರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.
ನಿಕಟಪೂರ್ವ ಮಹಾ ಪೌರರಾದ ಶಿವಕುಮಾರ್, ಕೆ.ಅರ್.ಕ್ಷೇತ್ರದ ಅಧ್ಯಕ್ಷರಾದ ವಡಿವೇಲು ಮತ್ತಿತರರು ಸಾಥ್ ನೀಡಿದರು.