ಹುಣಸೂರು : ಪಾಪಿ ಯುವಕನೊಬ್ಬ ಹೆತ್ತ ತಾಯಿ ಹಾಗೂ ತಂಗಿಯನ್ನ ಕೆರೆಗೆ ತಳ್ಳಿ ಕೊಲೆ ಮಾಡಿದ ಹೇಯ ಘಟನೆ ಹುಣಸೂರು ತಾಲೂಕಿನ ಮರೂರು ಗ್ರಾಮದಲ್ಲಿ ನಡೆದಿದೆ.
ತಂಗಿ ಧನುಶ್ರಿ(19) ತಾಯಿ ಅನಿತಾ(40)ಅವರನ್ನು ನಿತಿನ್(19)ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ.
ಹನಗೋಡು ಗ್ರಾಮದ ಅನ್ಯಕೋಮಿನ ಯುವಕನನ್ನ ಧನುಶ್ರೀ ಪ್ರೀತಿಸುತ್ತಿದ್ದಳು.ಈ ವಿಚಾರದಲ್ಲಿ ಅಣ್ಣ ತಂಗಿಯರ ನಡುವೆ ಆಗಾಗ ಜಗಳ ಆಗಿತ್ತು.ಹೆತ್ತವರು ಇಬ್ಬರನ್ನೂ ಸಮಾಧಾನ ಮಾಡುತ್ತಿದ್ದರು
ನಿನ್ನೆ ಸಂಜೆ ಹೆಮ್ಮಿಗೆ ಗ್ರಾಮದಲ್ಲಿರುವ ಮಾವನ ಮನೆಗೆ ಹೋಗೋಣ ಎಂದು ತಾಯಿ ಹಾಗೂ ತಂಗಿಯನ್ನ ನಿತಿನ್ ಬೈಕ್ ನಲ್ಲಿ ಕರೆದೊಯ್ದಿದ್ದಾನೆ.
ಮರೂರು ಕೆರೆ ಬಳಿ ಬೈಕ್ ನಿಲ್ಲಿಸಿ ಮೊದಲು ತಂಗಿಯನ್ನ ಕೆರೆಗೆ ತಳ್ಳಿದ್ದಾನೆ.ನಂತರ ಮಗಳನ್ನ ರಕ್ಷಿಸಲು ಬಂದ ತಾಯಿಯನ್ನೂ ಸಹ ಕೆರೆಗೆ ತಳ್ಳಿದ್ದಾನೆ.
ನಂತರ ಪಶ್ಚಾತ್ತಾಪ ಪಟ್ಟು ತಾಯಿಯನ್ನ ಉಳಿಸಿಕೊಳ್ಳಲು ನಿತಿನ್ ಕೆರೆಗೆ ಹಾರಿದ್ದಾನೆ.ಆದರೆ ಕಾಲ ಮಿಂಚಿ ಹೋಗಿತ್ತು, ಇಬ್ಬರೂ ಸಾವನ್ನಪ್ಪಿದ್ದರು.
ಒದ್ದೆ ಬಟ್ಟೆಯಲ್ಲೇ ಮನೆಗೆ ಬಂದು ತಂದೆ ಸತೀಶ್ ಬಳಿ ನಡೆದ ಘಟನೆಯನ್ನ ನಿತಿನ್ ತಿಳಿಸಿದ್ದಾನೆ.
ಆರೋಪಿ ನಿತಿನ್ ನನ್ನು ಹುಣಸೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಅಗ್ನಿಶಾಮಕ ಸಿಬ್ಬಂದಿ ಕೆರೆಯಿಂದ ಮೃತದೇಹಗಳನ್ನ ಹೊರತೆಗೆದಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.