ನಂಜನಗೂಡು: ಹಾಲು ಉತ್ಪಾದಕರಿಗೆ ನೀಡಬೇಕಾದ ಹಣ ಪಾವತಿಸುವಂತೆ ಬುದ್ದಿವಾದ ಹೇಳಿದ ಉಪಾಧ್ಯಕ್ಷನ ಮೇಲೆ ಕೋಪದ ಭರದಲ್ಲಿ ಹಲ್ಲೆ ನಡೆಸಿ ಸಾವಿಗೆ ಕಾರಣನಾದ ಕಾರ್ಯದರ್ಶಿ ಶಿವು ಈಗ ಕಂಬಿ ಎಣಿಸುವಂತಾಗಿದೆ.
ನಂಜನಗೂಡು ತಾಲೂಕಿನ ಎಬ್ಜಾಲ ಗ್ರಾಮದ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶಿವು ನನ್ನು ಹುಲ್ಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾಲು ಉತ್ಪಾದಕರಿಗೆ ಹಣ ನೀಡದೆ ಸತಾಯಿಸುತ್ತಿದ್ದ ಕಾರ್ಯದರ್ಶಿ ಶಿವು ಗೆ ಉಪಾಧ್ಯಕ್ಷ ಮಹದೇವನಾಯಕ ಬುದ್ದಿವಾದ ಹೇಳಿದ್ದರು.
ಶಿವು ತಾಯಿ ರವಿಯಮ್ಮ ಗೆ ವಿಚಾರ ತಿಳಿಸಿ ಹಣ ಪಾವತಿಸುವಂತೆ ಹೇಳಿದ್ದರಈ ವೇಳೆ ಶಿವು ಹಾಗೂ ಮಹದೇವನಾಯಕ ನಡುವೆ ಮಾತಿನ ಚಕಮಕಿ ನಡೆದು ಮಹದೇವನಾಯಕನ ಮೇಲೆ ಹಲ್ಲೆ ನಡೆಸಿ ಶಿವು ನಾಪತ್ತೆಯಾಗಿದ್ದ.
ಚಿಕಿತ್ಸೆ ಫಲಕಾರಿಯಾಗದೆ ಮಹದೇವನಾಯಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಹುಲ್ಲಹಳ್ಳಿ ಪೊಲೀಸರು ತಲೆಮರೆಸಿಕೊಂಡಿದ್ದ ಕಾರ್ಯದರ್ಶಿ ಶಿವು ನನ್ನು ಬಂಧಿಸಿದ್ದಾರೆ.