ಬೀದಿ ನಾಯಿಗಳ ನಿಯಂತ್ರಣ ಮಾಡಿ; ಅಧಿಕಾರಿಗಳಿಗೆ ಶಾಸಕ ಟಿ.ಎಸ್. ಶ್ರೀ ವತ್ಸ ಸೂಚನೆ

ಮೈಸೂರು: ಶಾಸಕ‌ ಟಿ.ಎಸ್.ಶ್ರೀವತ್ಸ ಅವರು ವಾರ್ಡ್ 57 ರ ಹುಡ್ಕೊ ಮನೆ ಬಳಿ ಉಮಾ ಮಹೇಶ್ವರ ಉದ್ಯಾನವನದ ಸುತ್ತ ಮುತ್ತ ಬೆಳಗ್ಗೆ ಪಾದಯಾತ್ರೆ ಮಾಡಿ ಜನರ ಸಮಸ್ಯೆ ಆಲಿಸಿದರು.

ಈ ವೇಳೆ ನಾಯುಗಳ ಕಾಟ ಹೆಚ್ಚಾಗಿರುವುದನ್ನು ಸ್ಥಳೀಯರು ತಿಳಿಸಿದರು.

ರಸ್ತೆ, ನೀರು,ಮರ ಕಡಿಯುವುದು,ಒಳಚರಂಡಿ, ವಿದ್ಯುತ್ ಮುಂತಾದ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲು ಕ್ರಮ ಕೈಗೊಳ್ಳಲಾಯಿತು.

ಇಡಬ್ಲ್ಯುಎಸ್ ಮನೆಯ ಕನ್ಸರ್ವೇಶನ್ ರಸ್ತೆ ಯಲ್ಲಿ ಜನರು ಕಸ ಸುರಿಯುತ್ತಿದ್ದು ಕೆಟ್ಟ ವಾಸನೆ ಬರುತ್ತದೆ ಸ್ವಚ್ಛ ಮಾಡಿಸಿಕೊಡಿ ಎಂದು ರಾಜೇಶ್ವರಿ ಎಂಬವರು ಈ ವೇಳೆ ಶಾಸಕರಲ್ಲಿ ಮನವಿ ಮಾಡಿದರು.

ಸ್ಥಳಿಯ ನಿವಾಸಿ ಮಹದೇವ್ ಎಂಬವರು
ಮನೆಯ ಸುತ್ತಮುತ್ತ ನಾಯಿಗಳ‌ ಹಾವಳಿ ಹೆಚ್ಚಾಗಿದೆ ಬೆಳಿಗ್ಗೆ ಓಡಾಡಲು ಸಮಸ್ಯೆ ಆಗುತ್ತಿದೆ ಎಂದು ಗಮನ ಸೆಳೆದರು.

ವಾರ್ಡ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಇರುವುದು ಕಂಡು ಬರುತ್ತಿದೆ ಈ ಕೂಡಲೇ ನಿಯಂತ್ರಣ ಮಾಡಬೇಕು ಎಂದು ಅಧಿಕಾರಿಗಳಿಗೆ ಶ್ರೀವತ್ಸ ತಾಕೀತು ಮಾಡಿದರು.

ಖಾಲಿ ನಿವೇಶನ ಸ್ವಚ್ಚಮಾಡಿಸಿ ನಿವೇಶನ ಮಾಲಿಕರುಗಳಿಗೆ ತಿಳುವಳಿಕೆ ನೀಡಬೇಕು ಎಂದು ಶಾಸಕರು ಅಧಿಕಾರಿಗಳಿಗೆ ತಿಳಿಸಿದರು.

ಮಾಜಿ ನಗರಪಾಲಿಕೆ ಮಾಜಿ ಸದಸ್ಯ ರಮೇಶ್,ವಲಯ ಅಯುಕ್ತ ಸತ್ಯ ಮೂರ್ತಿ, ಪರಿಸರ ಅಭಿಯಂತರರಾದ ಅರ್ಪಿತ,ಕಿರಿಯ ಅಭಿಯಂತರರಾದ ಮಣಿ,ಪೋಲಿಸ್ ಇನ್ ಪೆಕ್ಟರ್ ಧನಂಜಯ,ವಾಣಿವಿಲಾಸ್ ಮಂಜಣ್ಣ,ವಿದ್ಯುತ್ ಇಲಾಖೆ ಮಧನ್ ಅಧಿಕಾರಿಗಳು ಶಾಸಕರೊಂದಿಗೆ ಜನರ ಸಮಸ್ಯೆ ಆಲಿಸಿದರು.

ಈ‌ ವೇಳೆ ಸ್ಥಳಿಯರಾದ ರವಿ,ಹೇಮಂತ್,
ದಾಸ್ ವೆಂಕಟೇಶ್,ರವಿಕುಮಾರ್,
ಹರೀಶ್,ಕೇಬಲ್‌ ರಮೇಶ,ಚಲುವರಾಜು,ಕಮಲಮ್ಮ, ಗಿರಿಧರ್ ಯಾದವ್, ಶಾಸಕರ ಅಪ್ತ ಸಹಾಯಕ ಆದಿತ್ಯ ಮುಂತಾದವರು ಹಾಜರಿದ್ದರು.