ಮೈಸೂರು: ಮಾದಕ ವಸ್ತು ಗಾಂಜಾ ಹೊಂದಿದ್ದ ಇಬ್ಬರು ಪೆಡ್ಲರ್ ಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದು,
40 ಲಕ್ಷ ಮೌಲ್ಯದ 85. 730 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಒಡಿಸ್ಸಾ ಮೂಲದ ರಾಜಿಕ್ ಮಲ್ಲಿಕ್ ಹಾಗೂ ಆಂಧ್ರ ಮೂಲದ ಜಾಫರ್ ಬಂಧಿತ ಆರೋಪಿಗಳು.
ಮೈಸೂರಿನ ಸಾತಗಳ್ಳಿ ಒಂದನೇ ಹಂತದಲ್ಲಿ ಬೊಲೆರೋ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ವೇಳೆ ಆರೋಪಿಗಳು ಮಾಲು ಸಮೇತ ಸಿಕ್ಕಿಬಿದ್ದಿದ್ದಾರೆ.
ಒರಿಸ್ಸಾದಿಂದ ರೈಲಿನಲ್ಲಿ ಗಾಂಜಾ ತಂದು ಮೈಸೂರಿನಲ್ಲಿ ಚಿಲ್ಲರೆಯಾಗಿ ಮಾರಾಟ ಮಾಡಲು ನಿರ್ಧರಿಸಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.
ಅಪರಾಧ ಮತ್ತು ಸಂಚಾರ ಡಿಸಿಪಿ ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ ಸಂದೇಶ್ ಕುಮಾರ್ ಉಸ್ತುವಾರಿಯಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಎಂ.ಮೋಹನ್ ಕುಮಾರ್ ನೇತೃತ್ವದಲ್ಲಿ ಪಿಎಸ್ಸೈ ಗಳಾದ ಮಾರುತಿ ಅಂತರಗಟ್ಟಿ,ಕಿರಣ್ ಎಂ ಹಂಪಿಹೋಳಿ ಎಎಸ್ಸೈ ಅಸ್ಗರ್ ಖಾನ್ ಹಾಗೂ ಸಿಬ್ಬಂದಿ ಸಲೀಂ ಪಾಷ, ರಾಮ ಸ್ವಾಮಿ, ಲಕ್ಷ್ಮೀಕಾಂತ್ ಪಾಲ್ಗೊಂಡಿದ್ದರು.