ಮೈಸೂರು: ರಾಜ್ಯಕ್ಕೆ ಅನ್ಯಾಯವಾಗಿದೆ ಅದರ ವಿರುದ್ಧ ಧ್ವನಿ ಎತ್ತಿದ ಏಕೈಕ ಗಂಡು ಡಿ .ಕೆ.ಸುರೇಶ್ ಎಂದು ಶಾಸಕ ನರೇಂದ್ರ ಸ್ವಾಮಿ ಸಂಸದರ ಪರ ಬ್ಯಾಟಿಂಗ್ ಬೀಸಿದ್ದಾರೆ.
ಹೀಗೆ ಹೇಳುವ ಮೂಲಕ ಡಿ.ಕೆ.ಸುರೇಶ್ ಅವರ ಪ್ರತ್ಯೇಕ ದೇಶ ಹೇಳಿಕೆಯನ್ನು ಅವರಯ ಸಮರ್ಥಿಸಿ ಕೊಂಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ರಾಜ್ಯಕ್ಕೆ ಅನ್ಯಾಯವಾಗಿದೆ,ಅದಕ್ಕಾಗಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಅದರಲ್ಲಿ ನನಗೆ ಯಾವ ತಪ್ಪೂ ಕಾಣುತ್ತಿಲ್ಲ ಎಂದು ತಿಳಿಸಿದರು.
ಭಾವನಾತ್ಮಕ ಆಕ್ರೋಶ ಬಂದಾಗ ಆ ರೀತಿಯ ಪದ ಬಂದಿರುವುದು ಸಹಜ ಎಂದು ಹೇಳಿದರು.
ನರೇಂದ್ರ ಮೋದಿ, ಬಿಜೆಪಿಯಿಂದ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಆಬಗ್ಗೆ ಯಾವ ಸಂಸದರೂ ಪ್ರಶ್ನೆ ಮಾಡಲಿಲ್ಲ, ಪ್ರಶ್ನೆ ಮಾಡಿರುವುದು ಡಿ.ಕೆ ಸುರೇಶ್ ಮಾತ್ರ, ಯಾಕೆ ಆ ಪ್ರಶ್ನೆ ಎತ್ತಿದರು ಎಂಬುದರ ಬಗ್ಗೆ ಚರ್ಚೆಯಾಗಬೇಕು ಎಂದು ನರೇಂದ್ರ ಸ್ವಾಮಿ ತಿಳಿಸಿದರು.