ಜಮೀರ್ ಅನೈತಿಕ ಚಟುವಟಿಕೆಗಳಿಂದ ಅರ್ಥಿಕ ಸದೃಢರಾಗಿದ್ದಾರೆ -ರೇಣುಕಾಚಾರ್ಯ

ದಾವಣಗೆರೆ: ಶಾಸಕ ಜಮೀರ್ ಅಹಮದ್ ಅನೈತಿಕ ಚಟುವಟಿಕೆಗಳಿಂದ ಅರ್ಥಿಕವಾಗಿ ಸದೃಢರಾಗಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ರೇಣುಕಾಚಾರ್ಯ ಅವರು ಶನಿವಾರ ಮಾತನಾಡಿದರು.
ಅವರ ಆಸ್ತಿ ನೈತಿಕ ಮಾರ್ಗದಿಂದ ಬಂದಿದ್ದಲ್ಲ. ಹಲವು ಬಾರಿ ಶ್ರೀಲಂಕಾದ ಕ್ಯಾಸಿನೋಗೂ ಜಮೀರ್ ಹೋಗಿದ್ದಾರೆಂದರು. ಜಮೀರ್ ಆಹಮದ್ ಎರಡು ನಾಲಿಗೆ ವ್ಯಕ್ತಿ. ಕೊಟ್ಟ ಮಾತಿನಂತೆ ಎಂದೂ ನಡೆದುಕೊಂಡಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನೆ ವಾಚ್‍ಮನ್ ಆಗಬೇಕಿತ್ತು, ಅದರೆ ಆಗಲಿಲ್ಲ ಎಂದರು.
ಡ್ರಗ್ಸ್ ವಿಚಾರದಲ್ಲಿ ಎಷ್ಟೇ ಪ್ರಭಾವಿಗಳಿದ್ದರೂ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತಿದೆ ಎಂದು ಅವರು ಹೇಳಿದರು.
ಹಿಂದಿನ ಸರ್ಕಾರದ ವೈಫಲ್ಯಗಳಿಂದ ರಾಜ್ಯದಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ನಾವು ಡಗ್ಸ್ ದಂಧೆ ಮಟ್ಟ ಹಾಕುತ್ತೇವೆ ಎಂದರು.