ಡ್ರಗ್ಸ್ ದಂಧೆಯಲ್ಲಿ 32 ರಾಜಕಾರಣಿಗಳಿದ್ದಾರೆ -ಪ್ರಮೋದ್ ಮುತಾಲಿಕ್

ಮಂಡ್ಯ: ರಾಜ್ಯದ ಡ್ರಗ್ಸ್ ಪ್ರಕರಣದಲ್ಲಿ 32 ರಾಜಕಾರಣಿಗಳು ಶಾಮೀಲಾಗಿದ್ದಾರೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ನಗರದಲ್ಲಿ ಶನಿವಾರ ಪ್ರಮೋದ್ ಮುತಾಲಿಕ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಆಧಾರ ಸಹಿತವಾಗಿ ಎಲ್ಲಾ 32 ರಾಜಕಾರಣಿಗಳ ಪಟ್ಟಿಯನ್ನು ಗೃಹ ಸಚಿವರಿಗೆ ನೀಡಲಿದ್ದೇನೆ ಎಂದವರು ತಿಳಿಸಿದರು.
ಡ್ರಗ್ಸ್ ದಂಧೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಾಯಕರು ಇದ್ದಾರೆಂದರು.
ರಾಜಕಾರಣಿಗಳೇ ಡ್ರಗ್ ನಿಂದ ಸಾವಿರಾರು ಕೋಟಿ ವ್ಯವಹಾರ ನಡೆಸುತ್ತಿದ್ದಾರೆ. ರಾಜಕಾರಣಿಗಳದ್ದೇ ಪಬ್, ಕ್ಲಬ್, ಬಾರ್ ಎಲ್ಲ ಇವೆ ಎಂದು ಅವರು ಹೇಳಿದರು.
ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿರುವ ರಾಜಕಾರಣಿಗಳು ಸೇರಿದಂತೆ ಎಲ್ಲರನ್ನು ರಾಜ್ಯ ಸರಕಾರ ಬಂಧಿಸಬೇಕು ಎಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.