ಶ್ರೀರಂಗಪಟ್ಟಣ: ಬೆಳಂಬೆಳಿಗ್ಗೆ ರೌಡಿ ಶೀಟರ್ ಒಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ್ದು ಶ್ರೀರಂಗಪಟ್ಟಣ ತಾಲೂಕಿನ ಜನತೆ ಬೆಚ್ಚಿಬಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಹೊಬಳಿಯ ಪಾಲಹಳ್ಳಿ ಗ್ರಾಮದಲ್ಲಿ ರೌಡಿ ಶೀಟರ್ ಹತ್ಯೆಯಾಗಿದೆ.
ಪಾಲಹಳ್ಳಿ ಗ್ರಾಮದ ವಕೀಲ ನಾಗೇಂದ್ರ ಎಂಬುವರ ಮಗ ಪ್ರಜ್ವಲ್.ಆ. ಪಾಪು(29) ಕೊಲೆಯಾಗಿರುವ ರೌಡಿಶೀಟರ್.
ಪಾಲಹಳ್ಳಿ ಗ್ರಾಮದ ಬೇಕರಿ ಮುಂದೆ ಬೆಳಿಗ್ಗೆ ಆತ ನಿಂತಿದ್ದ ವೇಳೆ ಕೇರಳ ರಾಜ್ಯದ ನೋಂದಣಿ ಇರುವ ಬಿಳಿ ಇನೋವಾ ಕಾರಿನಿಂದ ಬಂದ ನಾಲ್ಕು ಜನ ಏಕಾ ಏಕಿ ಮಾರಕಾಸ್ತ್ರಗಳಿಂದ ಪ್ರಜ್ವಲ್ ಮೇಲೆ ಹಲ್ಲೆ ನಡೆಸಿದ್ದಾರೆ.
ದಾಳಿಯಿಂದ ಪ್ರಜ್ವಲ್ ತಪ್ಪಿಸಿಕೊಳ್ಳಲು ಪ್ರತಯ್ನಿಸಿದರೂ ಸಾದ್ಯವಾಗಿಲ್ಲ.ತೀವ್ರ ರಕ್ತಸ್ರಾವದಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆ ನಡೆದ ಸ್ಥಳಕ್ಕೆ ಮಂಡ್ಯ ಎಸ್ ಪಿ ಯತೀಶ್, ಎಎಸ್ ಪಿ ತಿಮ್ಮಯ್ಯ, ಡಿವೈಎಸ್ ಪಿ ಮುರುಳಿ, ಇನ್ಸ್ ಪೆಕ್ಟರ್ ಗಳಾದ ಪ್ರಕಾಶ್, ಎ ಮಲ್ಲೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಪ್ರಾರಂಭಿಸಿದ್ದಾರೆ.
ಘಟನೆಗೆ ಹಳೇ ದ್ವೇಷ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.