ಹೋಟೆಲ್ ಮೆಟ್ಟಿಲುಗಳಿಗೆ ಕನ್ನಡ ಬಾವುಟದ ಕೆಂಪು, ಹಳದಿ ಬಣ್ಣ:ಖಂಡನೆ

ಮೈಸೂರು: ಹೋಟೆಲ್ ಮೆಟ್ಟಿಲುಗಳಿಗೆ ಕನ್ನಡ ಬಾವುಟದ ಕೆಂಪು, ಹಳದಿ ಬಣ್ಣ ಹಚ್ಚಿರುವುದಕ್ಕೆ ಕರ್ನಾಟಕ ಸೇನಾ ಪಡೆ ಸದಸ್ಯರು ಖಂಡಿಸಿದ್ದಾರೆ.

ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ನೇತೃತ್ವದಲ್ಲಿ
ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಹೋಟೆಲ್ ಮಾಲಿಕರ ನಡೆಗೆ ಖಂಡಿಸಿದರು.

ಮೈಸೂರಿನ ಹೈವೆ ಸರ್ಕಲ್ ಬಳಿ ಇರುವ ನಲಪಾಡ್ ಹೋಟೆಲ್ ನಲ್ಲಿ ಕನ್ನಡ ಬಾವುಟದ ಕೆಂಪು ಮತ್ತು ಹಳದಿ ಬಣ್ಣ ಹಚ್ಚಲಾಗಿದ್ದು ಮೆಟ್ಟಿಲುಗಳ ಮೂಲಕ ಹೋಗುವ ಜನ ಅದನ್ನೇ ತುಳಿದುಕೊಂಡು ಹೋಗುವಂತಾಗಿದೆ.

ಕೂಡಲೇ ಬಣ್ಣ ತೆರವು ಮಾಡುವಂತೆ ಕರ್ನಾಟಕ ಸೇನಾ ಪಡೆ ಆಗ್ರಹ ಮಾಡಿ
ನಲಪಾಡ್ ಹೋಟೆಲ್ ಮಾಲಿಕರಿಗೆ ಚಳಿ ಬಿಡಿಸಿದರು.

ನಂತರ ಹೋಟೆಲ್ ಮಾಲೀಕ ರಿಯಾಜ್ ಕ್ಷಮಾಪಣೆ ಕೋರಿ ಹೋರಾಟಗಾರರ ಸಮ್ಮುಖದಲ್ಲೇ ಬೇರೆ ಬಣ್ಣ ಬದಲಾಯಿಸಲಲು ಕ್ರಮ ಕೈಗೊಂಡರು.

ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ‌ ಜೊತೆಯಲ್ಲಿ ಆಟೋ ಮಹದೇವ್, ಕುಮಾರ್ ಬಸಪ್ಪ, ಹನುಮಂತಯ್ಯ, ನೇಹಾ, ಕೇದಾರ್, ಮಂಜುಳ, ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.