ಚಾಮರಾಜನಗರ: ಭಾನುವಾರ ಚಾಮರಾಜನಗರ ಜಿಲ್ಲೆಯಲ್ಲಿ 80 ಮಂದಿಯಲ್ಲಿ ಕೊರೊನಾ ಪತ್ತೆಯಾಗಿದೆ.
ಗುಂಡ್ಲುಪೇಟೆ-36, ಚಾಮರಾಜನಗರ ತಾಲೂಕು-16, ಕೊಳ್ಳೇಗಾಲ-18, ಯಳಂದೂರು-7, ಹನೂರಿನಿಂದ ಮೂರು ಪ್ರಕರಣಗಳು ದೃಢವಾಗಿದೆ.
ಗುಂಡ್ಲುಪೇಟೆ ತಾಲೂಕಿನ ಕೋಡಿಹಳ್ಳಿ ಗ್ರಾಮದ 63 ವರ್ಷದ ವೃದ್ಧೆ ಕೋವಿಡೆತರ ಕಾರಣದಿಂದ ಸಾವನ್ನಪ್ಪಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಒಟ್ಟು ಸಂಖ್ಯೆ 3018. ಈ ಪೈಕಿ 2349 ಮಂದಿ ಗುಣಮುಖರಾಗಿದ್ದಾರೆ. 38 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 159 ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ.
ಕೊರೊನಾದಿಂದ 45 ಮಂದಿ ಹಾಗೂ ಕೋವಿಡೆತರ ಕಾರಣದಿಂದ 19 ಮಂದಿ ಸೇರಿದಂತೆ ಒಟ್ಟು 64 ಮಂದಿ ಸಾವನ್ನಪ್ಪಿದ್ದಾರೆ.