ಮೈಸೂರು: ಬೆಳ್ಳಂ ಬೆಳಿಗ್ಗೆ ಪಾಪದ ಪುನುಗು ಬೆಕ್ಕು ವಾಹನಕ್ಕೆ ಸಿಕ್ಕಿ ಮೃತಪಟ್ಟಿದ್ದು ಇದನ್ನು ನೋಡಲು ಜನ ದಾವಿಸಿದ್ದರು.
ಮೈಸೂರಿನ ಪೊಲೀಸ್ ಬಡಾವಣೆ ಸಮೀಪ ರಿಂಗ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಯಾವುದೋ ಅಪರಿಚಿತ ವಾಹನಕ್ಕೆ ಪುನುಗು ಬೆಕ್ಕು ಸಿಲುಕಿ ಸಾವನ್ನಪ್ಪಿದೆ.
ಪುನುಗು ಬೆಕ್ಕಿಗೆ ಬಹಳ ಬೇಡಿಕೆ ಇದ್ದು ಬೇಟೆಗಾರರ ಬಲೆಗೆ ಸಿಕ್ಕಿ ಇವು ಅಳಿವಿನಂಚಿಗೆ ಬಂದಿವೆ.ಇವುಗಳಲ್ಲಿ ಉತ್ಪತ್ತಿಯಾಗುವ ಪುನುಗು ಅಂದರೆ ಒಂದು ರೀತಿಯ ಸುಗಂಧಕ್ಕೆ ಬಹು ಬೇಡಿಕೆ ಇದೆ,ಹಾಗಾಗಿ ಬೇಟೆಗಾರರು ಇವುಗಳನ್ನು ಹಿಡಿಯುತ್ತಾರೆ.
ಪುನಗಿಗೆ ಒಂದು ಗ್ರಾಂಗೆ 800 ರೂ ನಿಂದ ಸಾವಿರ ರೂವರೆಗೆ ಇರುತ್ತದೆ,ಇದನ್ನು ದೃಷ್ಟಿ ನಿವಾರಣೆಗೂ ಬಳಸಲಾಗುತ್ತದೆ.
ಸುಗಂಧ ದ್ರವ್ಯ ತಯಾರಿಕೆಯಲ್ಲಿ ಈ ಸುಗಂಧವನ್ನು ಬಳಸಲಾಗುತ್ತದೆ,ಅಷ್ಟೇ ಅಲ್ಲ ತಿರುಪತಿ ತಿಮ್ಮಪ್ಪನಿಗೂ ಶುಕ್ರವಾರ ಅಭಿಷೇಕವಾದ ನಂತರ ಈ ಪುನುಗನ್ನು ಲೇಪಿಸಲಾಗುತ್ತದೆ.