ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಪ್ರಕರಣ ಎನ್‌ಐಎಗೆ

ಬೆಂಗಳೂರು: ರಾಮೇಶ್ವರಂ ಕೆಫೆ  ಬಾಂಬ್‌ ಬ್ಲಾಸ್ಟ್‌ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವರ್ಗಾವಣೆ ಮಾಡಲಾಗಿದೆ

ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡಿ ಎಫ್ಐಆರ್‌ ದಾಖಲಿಸಿದ ಎನ್‌ಐಎ ಈ ಕ್ಷಣದಿಂದಲೇ ಸ್ಫೋಟದ ಸಂಪೂರ್ಣ ತನಿಖೆ ಆರಂಭಿಸಲಿದೆ.

ದೇಶದ ಒಳಗಡೆ ಯಾವುದೇ ಉಗ್ರ ಚಟುವಟಿಕೆ, ಬಾಂಬ್‌ ಸ್ಫೋಟದ ತನಿಖೆಯನ್ನು ಎನ್‌ಐಎ ವಹಿಸಿಕೊಳ್ಳುತ್ತದೆ. ಈ ಹಿಂದೆ ಬೇರೆ ರಾಜ್ಯದಲ್ಲಿ ಹಲವು ಪ್ರಕರಣಗಳಿಗೆ ಹೊಸ ಪ್ರಕರಣಗಳು ಸಾಮ್ಯತೆ ಇದ್ದು, ಆರೋಪಿಗಳು ಭಾಗಿಯಾಗಿದ ಹಿನ್ನಿ ಎನ್‌ಐಎ ಈ ಪ್ರಕರಣಗಳನ್ನು ಬೇಧಿಸಿತ್ತು.ರಾಜ್ಯಗಳಲ್ಲಿ ಉಗ್ರ ಕೃತ್ಯದಂತಹ ಪ್ರಕರಣಗಳು ದಾಖಲಾದಾಗ ಅದನ್ನು ಕೇಂದ್ರ ಸರ್ಕಾರದ ಅದೀನದಲ್ಲಿರುವ ಎನ್‌ಐಎಗೆ ವರ್ಗಾಯಿಸಲಾಗುತ್ತದೆ.ಹಾಗೆಯೇ ರಾಮೇಶ್ವರಂ ಪ್ರಕರಣ ಕೂಡಾ ವರ್ಗಾವಣೆಯಾಗಿದೆ.