ಭಾರತದ ಮೊದಲ ನದಿಯೊಳಗಿನ ಮೆಟ್ರೋ ಸುರಂಗ ಮಾರ್ಗ ಲೋಕಾರ್ಪಣೆ

ಕೋಲ್ಕತ್ತಾ: ಭಾರತದ ಮೊದಲ ನದಿಯೊಳಗಿನ ಮೆಟ್ರೋ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು.

ಕೋಲ್ಕತ್ತಾ ಮೆಟ್ರೋ ಪೂರ್ವ-ಪಶ್ಚಿಮ ಕಾರಿಡಾರ್‌ ಹೌರಾ

ಮೈದಾನ-ಎಸ್‌ಪ್ಲೇನೇಡ್‌ವರೆಗಿನ  ಮಾರ್ಗವನ್ನು ಉದ್ಘಾಟಿಸಿದ ಪ್ರಧಾನಿ,ನಂತರ ಮಕ್ಕಳದೊಂದಿಗೆ ಮೆಟ್ರೋದಲ್ಲಿ ಸಂಚಾರ ಮಾಡಿದರು.

ಇದೇ ವೇಳೆ ಮೋದಿ ದೇಶದ ವಿವಿಧ ಭಾಗಗಳಲ್ಲಿ ಒಟ್ಟು 15,400 ಕೋಟಿ ರೂ. ಮೊತ್ತದಲ್ಲಿ ನಿರ್ಮಾಣವಾಗಲಿರುವ  ಮೂಲಸೌಕರ್ಯ ಕಾಮಗಾರಿಗಳಿಗೂ ಚಾಲನೆ ನೀಡಿದರು.

ಕೋಲ್ಕತಾ ಹಾಗೂ ಹೌರಾ ನಗರವನ್ನು ಸಂಪರ್ಕಿಸುವ ಈ ಮೆಟ್ರೋ ರೈಲು ಪಶ್ಚಿಮ ಬಂಗಾಳದ ಬಹು ಮುಖ್ಯ ಯೋಜನೆ, ಹೂಗ್ಲಿ ನದಿಯು ಕೋಲ್ಕತ್ತಾ ಮತ್ತು ಹೌರಾ ಅವಳಿ ನಗರಗಳನ್ನು ಕ್ರಮವಾಗಿ ಪೂರ್ವ ಮತ್ತು ಪಶ್ಚಿಮ ದಂಡೆಗಳಲ್ಲಿ ಪ್ರತ್ಯೇಕಿಸುತ್ತದೆ. ಈ ಎರಡು ನಗರಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ರೈಲು ಹೂಗ್ಲಿ ನದಿಯ ನೀರಿನೊಳಗಿನಿಂದ ಸಾಗಲಿರುವುದು ವಿಶೇಷ.

ರೈಲು ಮಾರ್ಗ 16.6 ಕಿಲೋಮೀಟರ್ ಉದ್ದವನ್ನು ಹೊಂದಿದ್ದು 6 ನಿಲ್ದಾಣಗಳಿವೆ ಇ ಈ ಪೈಕಿ 3 ನಿಲ್ದಾಣಗಳು ನೀರಿನ ಅಡಿಯಲ್ಲಿ ಮತ್ತು 3 ನಿಲ್ದಾಣಗಳು ನೆಲದ ಮೇಲೆ ನಿರ್ಮಾಣವಾಗಿದೆ.

4,965 ಕೋಟಿ ರೂ. ವೆಚ್ಚದಲ್ಲಿ 4.8 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣಗೊಂಡಿದೆ. ನೆಲಮಟ್ಟದಿಂದ 30 ಮೀಟರ್ ಅಡಿಯಲ್ಲಿ ನಿಲ್ದಾಣ ನಿರ್ಮಾಣವಾಗುವ ಮೂಲಕ  ಹೌರಾ ಭಾರತದ ಆಳವಾದ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಕೋಲ್ಕತ್ತಾ ಪೂರ್ವ-ಪಶ್ಚಿಮ ಮೆಟ್ರೋ ಕಾರಿಡಾರ್ ಯೋಜನೆಗೆ ಅಡಿಪಾಯವನ್ನು ಫೆಬ್ರವರಿ 2009 ರಲ್ಲೇ ಹಾಕಿದ್ದರೂ  ಸುರಂಗದ ನಿರ್ಮಾಣ ಕಾರ್ಯ 2017 ರಲ್ಲಿ ಆರಂಭವಾಯಿತು.ಈ‌ ಸುರಂಗದಲ್ಲಿ ಸಂಚಿರಿಸುವುದೇ ಒಂದು ಅದ್ಭುತ ಎಂದು ಬಣ್ಣಿಸಲಾಗುತ್ತಿದೆ.