ಕನ್ನ ಕೊರೆದು ಬ್ಯಾಂಕ್ ದರೋಡೆಗೆ ಯತ್ನ

ಮೈಸೂರು: ಬ್ಯಾಂಕ್ ಶೌಚಾಲಯದ ಗೋಡೆಗೆ ಕನ್ನ ಕೊರೆದು ದರೋಡೆಗೆ ಯತ್ನಿಸಿದ ಘಟನೆ ಎಸ್ ಬಿ ಐ ನಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ದೊಡ್ಡೇಬಾಗಿಲು ಗ್ರಾಮದಲ್ಲಿರುವ ಎಸ್ ಬಿ‌ ಐ ಬ್ಯಾಂಕ್ ಗೆ ಖದೀಮರು ಕನ್ನ ಕೊರೆದು ಏನನ್ನೂ ದೋಚಲಾಗದೆ  ಹಿಂದಿರುಗಿದ್ದಾರೆ.

ಬ್ಯಾಂಕ್ ನ ಶೌಚಾಲಯದ ಗೋಡೆಗೆ ಕನ್ನ ಹಾಕಿ ಒಳ ಪ್ರವೇಶಿಸಿರುವ ಖದೀಮರು ಸಿಸಿ ಕ್ಯಾಮರಾ ಹಾನಿಗೊಳಿಸಿ ಲಾಕರ್ ತೆರೆಯಲು ಯತ್ನಿಸಿ ವಿಫಲರಾಗಿ ಬರಿಗೈಲಿ ಹೋಗಿದ್ದಾರೆ.

ಎಸ್ ಬಿ ಐ ಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಾಬು ಅವರು ಭೇಟಿ ನೀಡಿ ಪರಿಶೀಲಿಸಿದರು, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಬ್ಯಾಂಕ್ ನಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾದಲ್ಲಿ ದುಷ್ಕರ್ಮಿಗಳ ಚಲನವಲನ ಸೆರೆಯಾಗಿದೆ,ಟಿ.ನರಸೀಪುರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.