ಮೈಸೂರು: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮೈಸೂರು-ಬೆಂಗಳೂರು ನಡುವಿನ ರಾಜ್ಯ ರಾಣಿ ಎಕ್ಸ್‌ಪ್ರೆಸ್ ಅನ್ನು ಎಲ್ಲಾ ಮಹಿಳಾ ಸಿಬ್ಬಂದಿಗಳೇ ಕೌಶಲ್ಯದಿಂದ ನಿರ್ವಹಿಸಿದ್ದಾರೆ.
ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ರಾಜ ರಾಣಿ ಎಕ್ಸ್‌ಪ್ರೆಸ್ ಅನ್ನು ಎಲ್ಲಾ ಮಹಿಳಾ ಸಿಬ್ಬಂದಿಗಳೇ ಕೌಶಲ್ಯದಿಂದ ನಿರ್ವಹಿಸಿದ್ದು ಹೆಮ್ಮೆಯ ವಿಷಯ.
ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ರವರ ದೂರದೃಷ್ಟಿ, ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮ ಈ ವರ್ಷದ ವಿಷಯವಾದ ಮಹಿಳೆಯರಲ್ಲಿ ಹೂಡಿಕೆ ಮಾಡಿ- ಪ್ರಗತಿಯನ್ನು ವೇಗಗೊಳಿಸಿ, ಘೋಷವಾಕ್ಯವು ಪ್ರತಿಧ್ವನಿಸಿತು.
ಮಹಿಳೆಯರ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಮಹಿಳಾ ಉದ್ಯೋಗಿಗಳಲ್ಲಿ ಪ್ರಗತಿಯನ್ನು ಗಮನಾರ್ಹವಾಗಿ ಹೆಚ್ಚಿಸಲು ಮಹಿಳೆಯರ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಒತ್ತು ನೀಡಲಾಯಿತು.
ಮಹಿಳಾ ಲೊಕೊ ಪೈಲಟ್ ಆದ ಶ್ರೀಶಾ ಜಿ, ಸಹಾಯಕ ಲೊಕೊ ಪೈಲಟ್ ಆದ ಸೋನಾ ಜಿ, ರೈಲು ವ್ಯವಸ್ಥಾಪಕರಾದ ಪ್ರಿಯದರ್ಶಿನಿ, ಮಹಿಳಾ ಟಿಕೆಟ್ ತಪಾಸಕರು ಮತ್ತು ರೈಲ್ವೆ ಸಂರಕ್ಷಣಾ ದಳ ಸೇರಿ ಎಲ್ಲಾ ಮಹಿಳಾ ಸಿಬ್ಬಂದಿ ರಾಜ್ಯ ರಾಣಿ ಎಕ್ಸ್‌ಪ್ರೆಸ್ ಅನ್ನು ದೋಷರಹಿತವಾಗಿ ನಿರ್ವಹಿಸಿ ತಮ್ಮ ಸಾಮರ್ಥ್ಯ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿದ್ದು ನಿಜಕ್ಕೂ ವಿಶೇಷ.
ಶಿಲ್ಪಿ ಅಗರ್ವಾಲ್ ರವರು ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆಯ ಸದಸ್ಯರೊಂದಿಗೆ ಮೈಸೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಗುಲಾಬಿ ಮೊಗ್ಗುಗಳು ಮತ್ತು ಸಿಹಿಯನ್ನು ವಿತರಿಸಿದ್ದು
ಈ ವೇಳೆ ಮಾತನಾಡಿದ ಶಿಲ್ಪಿ ಅಗರ್ವಾಲ್, ಭಾರತೀಯ ರೈಲ್ವೆಯಲ್ಲಿ ಮಹಿಳೆಯರಲ್ಲಿ ಧನಾತ್ಮಕ ಬದಲಾವಣೆಯನ್ನು ಹೆಚ್ಚಿಸಲು ಮತ್ತು ಹೆಚ್ಚು ಮಹಿಳೆಯರನ್ನು ಒಳಗೊಳ್ಳುವ ಮತ್ತು ಕೆಲಸದಲ್ಲಿ ಸಮಾನವಾದ ಸ್ಥಾನವನ್ನು ಉತ್ತೇಜಿಸುವ ಕಾರಣಕ್ಕಾಗಿ ರೈಲ್ವೆಯಲ್ಲಿ ಮಹಿಳಾ ಸಬಲೀಕರಣದ ಅಗತ್ಯವಿದೆ ಎಂದು ತಿಳಿಸಿದರು.
ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರುಗಳಾದ ಇ.ವಿಜಯ, ವಿನಾಯಕ್ ನಾಯಕ್, ಹಿರಿಯ ವಿಭಾಗೀಯ ಕಾರ್ಯ ನಿರ್ವಾಹಕಿ ಅಂಕಿತಾ ವರ್ಮಾ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಜೆ ಲೋಹಿತೇಶ್ವರ, ಹಿರಿಯ ವಿಷ್ಣು ಗೌಡ ಸೇರಿದಂತೆ ಅನೇಕರು ಹಾಜರಿದ್ದರು.