ಅಕ್ಮಲ್ ಕೊಲೆ ಪ್ರಕರಣ: 4 ಆರೋಪಿಗಳ ಬಂಧನ

ಮೈಸೂರು: ಮಾಜಿ ಕಾರ್ಪೊರೇಟರ್ ಅಯಾಜ್ ಪಂಡು ಸಹೋದರ ಮಹಮದ್ ಅಕ್ಮಲ್ ಕೊಲೆ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.

ವಾರ್ಡ್ ನಂ 33 ರ ಮಾಜಿ ಕಾರ್ಪೊರೇಟರ್ ಬಷೀರ್ ,ಇಬ್ರಾಹಿಂ,ಪರ್ವೀಜ್ ಬೇಗ್ ಹಾಗೂ ಮಹಮದ್ ಇಲಿಯಾಸ್ ಬಂಧಿತ ಆರೋಪಿಗಳು.

ಮಾರ್ಚ್ 8 ರಂದು ಮಹಮದ್ ಅಕ್ಮಲ್ ರನ್ನ ರಾಜೀವ್ ನಗರದ ಆರ್ಯ ಬೇಕರಿ ಬಳಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದರು.

ಈ ಸಂಭಂಧ ಪತ್ನಿ ನಾಜಿಯಾ ಉದಯಗಿರಿ ಪೊಲೀಸ್ ಠಾಣೆಯಲ್ಲಿ ವಾರ್ಡ್ ನಂ.33 ರ ಕಾರ್ಪೊರೇಟರ್ ಆಗಿದ್ದ ಬಷೀರ್ ಅಹಮದ್,ಆತನ ಪುತ್ರ ಫೈಜಾನ್ ಅಹಮದ್,ಅಲ್ತಾಫ್ ಖಾನ್,ಪರ್ವೀಜ್,ಇಬ್ರಾಹಿಂ ಹಾಗೂ ಇತರರ ಮೇಲೆ ತನ್ನ ಪತಿಯನ್ನು ಕೊಲೆ ಮಾಡಿಸಿದ್ದಾರೆಂದು ಆರೋಪಿಸಿ ದೂರು ನೀಡಿದ್ದರು.

ಪ್ರಕರಣದ ತನಿಖೆಯನ್ನ ಸಿಸಿಬಿ ಪೊಲೀಸರಿಗೆ ವಹಿಸಲಾಗಿತ್ತು.ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್,ಡಿಸಿಪಿ ಮುತ್ತುರಾಜ್ ಮತ್ತು ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ ಸಂದೇಶ್ ಕುಮಾರ್ ಉಸ್ತುವಾರಿಯಲ್ಲಿ ಇನ್ಸ್‌ಪೆಕ್ಟರ್ ಪೂವಯ್ಯ,ಪಿಎಸ್ಸೈ ಲೇಪಾಕ್ಷ,ರಮೇಶ್ ಕೊನರೇರಿ ಹಾಗೂ ಸಿಬ್ಬಂದಿಗಳ ವಿಶೇಷ ತಂಡ ರಚಿಸಲಾಗಿತ್ತು.

ಆರೋಪಿಗಳನ್ನ ಮೈಸೂರಿನ ಎರಡನೇ ಎಎಫ್ ಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಧೀಶರಾದ ರೇಖಾ ರವರು 7 ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ನೀಡಿದ್ದಾರೆ.