ಸ್ವಚ್ಛ ಬೆಂಗಳೂರು ಮಾಡುವುದು ನಮ್ಮ ಸಂಕಲ್ಪ:ರಾಮಲಿಂಗಾರೆಡ್ಡಿ

ಬೆಂಗಳೂರು: ಸ್ವಚ್ಛ ಬೆಂಗಳೂರು ಮಾಡುವುದು ನಮ್ಮ ಸಂಕಲ್ಪವಾಗಿದೆ ಎಂದು ಸಚಿವರೂ ಬಿಟಿಎಂ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ರಾಮಲಿಂಗಾರೆಡ್ಡಿ‌ ತಿಳಿಸಿದರು.

ಬಿಟಿಎಂ ವಿಧಾನಸಭಾ ಕ್ಷೇತ್ರದ ಕೋರಮಂಗಲದಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ವತಿಯಿಂದ ನಿರ್ಮಿಸಿರುವ ದ್ವಿತೀಯ ಹಂತದ ನೂತನ ಘನತ್ಯಾಜ್ಯ ವರ್ಗಾವಣೆ ಘಟಕವನ್ನು ಉಪ-ಮುಖ್ಯಮಂತ್ರಿ

ಡಿ.ಕೆ ಶಿವಕುಮಾರ್ ಅವರೊಂದಿಗೆ ಸೇರಿ ಉದ್ಘಾಟಿಸಿದ ನಂತರ ರಾಮಲಿಂಗ ರೆಡ್ಡಿ ಮಾತನಾಡಿದು.

ಸ್ವಚ್ಛ ಬೆಂಗಳೂರು ಮಾಡಲು ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿಯಲ್ಲಿ ವಿಕೇಂದ್ರೀಕೃತ ಪದ್ಧತಿಯನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಸ್ಥಳೀಯ ಮಟ್ಟದಲ್ಲಿಯೇ ಕಸವನ್ನು ಸಂಸ್ಕರಣೆ ಮಾಡುವ ಪ್ರಕ್ರಿಯೆ ಜಾರಿಗೊಳಿಸಿ ಕಸದ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ ದಕ್ಕೆ ನಾಗರಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ಸಚಿವರು ಮನವಿ ಮಾಡಿದರು.

ಬಿಡಿಎ ಅಧ್ಯಕ್ಷ  ಎನ್.ಎ ಹ್ಯಾರಿಸ್, ಮಾಜಿ ಪಾಲಿಕೆ ಸದಸ್ಯರು, ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳು ಈ ವೇಳೆ ಹಾಜರಿದ್ದರು.