ನಾನು ಬಹಳ ಹೋಂ ವರ್ಕ್ ಮಾಡಿಯೇ ರಾಜಕಾರಣಕ್ಕೆ ಬಂದಿದ್ದೇನೆ:ಯದುವೀರ್

ಮೈಸೂರು: ನಾನು ಬಹಳ ಹೋಂ ವರ್ಕ್ ಮಾಡಿಯೇ ರಾಜಕಾರಣಕ್ಕೆ ಬಂದಿದ್ದೇನೆ ಎಂದು ಲೋಕಸಭಾ ಬಿಜೆಪಿ ಅಭ್ಯರ್ಥಿ ಯದುವೀರ್ ತಿಳಿಸಿದ್ದಾರೆ.

ನನ್ನ ರಾಜಕೀಯ ಪ್ರವೇಶದ ಹಿಂದೆ ನನ್ನ ಪತ್ನಿಯ ಮತ್ತು ಕುಟುಂಬದ ಪಾತ್ರ ಇಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

ನನಗೆ ಬಿಜೆಪಿ ಟಿಕೆಟ್ ಕೊಡಿಸಿದ್ದು ಪತ್ನಿಯ ಕುಟುಂಬದವರಲ್ಲ ಎಂದು ಹೇಳಿದ ಅವರು, ಟಿಕೆಟ್ ಸಿಗದೆ‌ ಹೋದುದಕ್ಕೆ ಪ್ರತಾಪ್ ಸಿಂಹ ಅವರಿಗೆ ನನ್ನ ಮೇಲೆ ಬೇಸರವಿಲ್ಲ, ಅವರೇ ಖುದ್ದಾಗಿ ನನ್ನ ಜೊತೆ ಮಾತನಾಡಿದ್ದಾರೆ, ಅವರು ಪ್ರಚಾರಕ್ಕೆ ಬರುತ್ತಾರೆ, ಅವರು ಮಾಡಿರೋ ಕೆಲಸದಿಂದ ನನ್ನ ಜವಾಬ್ದಾರಿ ಇನ್ನೂ ಹೆಚ್ಚಿದೆ ಎಂದು ಹೇಳಿದರು.

ನಮ್ಮ ಮೈಸೂರು ಮತ್ತು ಕೊಡಗು ಅಭಿವೃದ್ಧಿ ಮಾಡಬೇಕು ಎಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇನೆ.

ಇಲ್ಲಿನ ಸಾಂಸ್ಕೃತಿಕ ವಾತಾವರಣವನ್ನು ಸಂರಕ್ಷಣೆ ಮಾಡಬೇಕು ಹಾಗೂ ಅಧಿಕಾರದಲ್ಲಿದ್ದಾಗ ಜನರ ಸೇವೆ ಮಾಡಲು ಹೆಚ್ಚಿನ ಅವಕಾಶವಿದೆ. ಜನರ ನೀರೀಕ್ಷೆಯನ್ನು ನಾನು ಪೂರ್ತಿಮಾಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ