ಮೈಸೂರು: ಮೈಸೂರು ಮಹರಾಜರು ನಾಡಿಗೆ ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಕೊಂಡಾಡಿದರು.
ನಗರದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾತನಾಡಿದ ಪ್ರತಾಪ್ ಸಿಂಹ,ನಾಡಿಗೆ
ಮೈಸೂರು ಮಹರಾಜರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಅದೇ ರೀತಿ ಪ್ರಧಾನಿ ಮೋದಿಯವರು ಮೈಸೂರಿಗೆ ಹಲವು ಯೋಜನೆಗಳನ್ನ ಕೊಟ್ಟಿದ್ದಾರೆ,ಮಹರಾಜರು ಹಾಕಿಕೊಟ್ಟ ಪರಂಪರೆಯನ್ನ ಹತ್ತು ವರ್ಷದಲ್ಲಿ ನಾನು ಮುಂದುವರಿಸಿದ್ದೇನೆ ಎಂದು ತಿಳಿಸಿದರು.
ಬಿಜೆಪಿ ಶಾಶ್ವತವಾಗಿ ಅಧಿಕಾರದಲ್ಲಿರಬೇಕು ಅದಕ್ಕಾಗಿ ಈಗಿನಿಂದಲೆಡ ಶ್ರಮಿಸೋಣ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ರನ್ನ ಯದುವೀರ್, ಪ್ರತಾಪ್ ಸಿಂಹ ಜಾಗದಲ್ಲಿ ಊಹಿಸಿಕೊಳ್ಳಲಿಕ್ಕೆ ಆಗುತ್ತಾ,ಅವರ ಸಾಧನೆ ಏನು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಭ್ಯರ್ಥಿಯನ್ನ ಜೈಲಿಗೆ ಕಳುಹಿಸುತ್ತೇನೆ ಎಂದು ಇದೇ ವೇಳೆ
ಲಕ್ಷ್ಮಣ್ ಹೆಸರು ಹೇಳದೆ ಪ್ರತಾಪ್ ಸಿಂಹ
ವಾಗ್ದಾಳಿ ನಡೆಸಿದರು.
ಇದೀಗ ಒಕ್ಕಲಿಗ ಅಂತ ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಅಭ್ಯರ್ಥಿ,ಇಷ್ಟು ದಿನ ಒಕ್ಕಲಿಗ ಮುಖಂಡರಿಗೆ ಅವಹೇಳನ ಮಾಡಿದ‌್ದು ಮರೆತು ಹೋಯಿತೆ ಎಂದು ಕಾರವಾಗಿ ಪ್ರಶ್ನಿಸಿದರು.
ಆತನ ವಿರುದ್ಧ ನ್ಯಾಯಾಲಯದಲ್ಲಿ ಎರಡು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದೇನೆ,
ಆತ ಬರಿ ಸುಳ್ಳು ಹೇಳಿಕೊಂಡು ವೈಯುಕ್ತಿಕ ಟೀಕೆ ಮಾಡಿಕೊಂಡು ಓಡಾಡುತ್ತಿದ್ದಾನೆ
ಆತನನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಲಕ್ಷ್ಮಣ್ ವಿರುದ್ದನ ಪ್ರತಾಪ್ ಸಿಂಹ ಕಿಡಿಕಾರಿದರು.