ಮೈಸೂರು: ರಾಜ ವಂಶಸ್ಥ ಯದುವೀರ್ ಬಳಿ ಸಾವಿರಾರು ಕೋಟಿ ರೂ ಇರಬಹುದು ಎಂದು ಇಡೀ ನಾಡಿನ ಜನತೆ ತಿಳಿದುಕೊಂಡಿರಬಹುದು ಆದರೆ ಅವರ ಬಳಿ ಕೇವಲ ಕೆಲವು ಕೋಟಿ ಅಷ್ಟೇ.
ಇಂದು ಉಮೇದುವಾರಿಕೆ ಸಲ್ಲಿಕೆ ವೇಳೆ ಯದುವೀರ್ ಅವರು ಆಸ್ತಿ ವಿವರ ಘೋಷಣೆ ಮಾಡಿದ್ದಾರೆ.
ಯದುವೀರ್ ಕೈಯಲ್ಲಿ ಒಂದು ಲಕ್ಷ ನಗದು, ಎರಡು ಬ್ಯಾಂಕ್ ಖಾತೆಗಳಲ್ಲಿ 23.55 ಲಕ್ಷ ರೂ, ಒಂದು ಕೋಟಿ ಮೌಲ್ಯದ ವಿವಿಧ ಕಂಪನಿಗಳಲ್ಲಿ ಬಾಂಡ್ ಮತ್ತು ಶೇರುಗಳು, ನಾಲ್ಕು ಕೆಜಿ ಚಿನ್ನ, 20 ಕೆಜಿ ಬೆಳ್ಳಿ ಇದೆ ಎಂದು ಘೋಷಿಸಿದ್ದಾರೆ.
ಯದುವೀರ್ ಯಾವುದೇ ಕೃಷಿ ಭೂಮಿ ಹಾಗೂ ಸ್ವಂತ ಮನೆ ಹೊಂದಿಲ್ಲ. ಯಾವುದೇ ವಾಣಿಜ್ಯ ಕಟ್ಟಡಗಳಿಲ್ಲ. ಬ್ಯಾಂಕ್ ಗಳಲ್ಲಿ ಸಾಲ ಪಡೆದಿಲ್ಲ. ಯಾವುದೇ ರೀತಿಯ ಆಧಾಯ ತೆರಿಗೆ ಹಣ ಬಾಕಿ ಉಳಿಸಿಕೊಂಡಿಲ್ಲ.
ಯದುವೀರ್ ಮೇಲೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ, ಒಟ್ಟು 4,99,59,303 ಮೌಲ್ಯದ ಚರಾಸ್ತಿ ಹೊಂದಿದ್ದಾರೆ,ಅವರಿಗೆ ಯಾವುದೇ ಸ್ಥಿರಾಸ್ತಿ ಇಲ್ಲ.