8 ಮಂದಿ ದರೋಡೆಕೋರರ ಬಂಧನ

ಮೈಸೂರು: ದರೋಡೆ ಮಾಡಲು ಹೊಂಚು ಹಾಕಿದ್ದ 8 ಮಂದಿ ದರೋಡೆಕೋರರನ್ನು ನಗರದ ಸರಸ್ವತಿಪುರಂ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಡಿಸಿಪಿ ಡಾ.ಎ.ಎನ್ ಪ್ರಕಾಶ್ ಗೌಡ ಅವರು ಈ ಕುರಿತು ನಗರದ ಸರಸ್ವತಿಪುರಂ ಪೆÇಲೀಸ್ ಠಾಣೆಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಶರತ್, ಸುಮಂತ್, ಧರ್ಮೇಶ್, ದಿನೇಶ್, ಸುನಿಲ್ ಕುಮಾರ್, ಶಶಾಂಕ್, ಕಾರ್ತೀಕ್, ಮಹದೇವ್ ಬಂಧಿತ ದರೋಡೆಕೋರರು.
ಬಂಧಿತರಿಂದ ಪೊಲೀಸರು 6 ಸಾವಿರ ರೂ.ನಗದು, ಕೃತ್ಯಕ್ಕೆ ಬಳಸಿದ್ದ ಒಂದು ಮಾರುತಿ ಓಮ್ನಿ ಕಾರು, 4 ಬೈಕ್, 11 ಮೊಬೈಲ್ ಗಳು, ಒಂದು ಹಾಕಿ ಸ್ಟಿಕ್, 2 ಡ್ರಾಗನ್ ಚಾಕು, 5 ಮಂಕಿ ಕ್ಯಾಪ್, 5 ಖಾರದ ಪುಡಿ ಪ್ಯಾಕೇಟ್ ಗಳು, 1 ರಾಡ್, 3 ವಿಕೆಟ್ ಗಳು, 1 ಲಾಂಗ್ ನ್ನು ವಶಪಡಿಸಿಕೊಂಡಿದ್ದಾರೆ.
ಇವರ ಬಂಧನದಿಂದ ಒಟ್ಟು ಐದು ಪ್ರಕರಣಗಳು ಪತ್ತೆಯಾಗಿವೆ. ಸರಸ್ವತಿಪುರಂ, ವಿದ್ಯಾರಣ್ಯಪುರಂ, ಲಕ್ಷ್ಮಿಪುರಂ ಪೆÇಲೀಸ್ ಠಾಣೆಯ ರಾಬರಿ ಪ್ರಕರಣ ಹಾಗೂ ವಿಜಯನಗರ, ಕೆ.ಆರ್.ಪೆÇಲೀಸ್ ಠಾಣೆ ವ್ಯಾಪ್ತಿಯ ಕೊಲೆಯತ್ನ ಪ್ರಕರಣ ಪತ್ತೆಯಾಗಿವೆ ಎಂದವರು ತಿಳಿಸಿದರು.
ಸರಸ್ವತಿಪುರಂ ಪೆÇಲೀಸ್ ಠಾಣೆಯ ಪಿಎಸ್ ಐ ಭವ್ಯ ಅವರು ಸೆ. 9ರಂದು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಬೋಗಾದಿ ರಿಂಗ್ ರಸ್ತೆಯಲ್ಲಿರುವ ಭೋಗಲಿಂಗೇಶ್ವರ ದೇವಸ್ಥಾನದ ಹತ್ತಿರ ಅನುಮಾನಾಸ್ಪದವಾಗಿ ಓಮ್ನಿ ಕಾರಿನ ಬಳಿ ಬಂಧಿತ ಆರೋಪಿಗಳು ನಿಂತಿದ್ದು ಅನುಮಾನ ಗೊಂಡ ಪೊಲೀಸರು ಇವರನ್ನು ವಿಚಾರಿಸಿದ್ದಾರೆ.
ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು, ವಾಹನ ತಡೆದು ಸವಾರರನ್ನು ಹೆದರಿಸಿ ಅವರಿಂದ ಹಣ ಮತ್ತು ಚಿನ್ನಾಭರಣಗಳನ್ನು ದರೋಡೆ ಮಾಡಲು ಹೊಂಚು ಹಾಕುತ್ತಿರುವುದು ಖಚಿತವಾದ್ದರಿಂದ ಆರೋಪಿಗಳನ್ನು ಬಂಧಿಸಿದ್ದಾರೆಂದು ಡಿಸಿಪಿ ತಿಳಿಸಿದರು.
ಡಿಸಿಪಿಗಳಾದ ಡಾ.ಎ.ಎನ್ ಪ್ರಕಾಶ್ ಗೌಡ, ಗೀತಾ ಪ್ರಸನ್ನ ಮಾರ್ಗದರ್ಶನದಲ್ಲಿ ಕೃಷ್ಣರಾಜ ವಿಭಾಗದ ಸಹಾಯಕ ಪೆÇಲೀಸ್ ಆಯುಕ್ತ ಎಂ.ಎಸ್.ಪೂರ್ಣಚಂದ್ರತೇಜಸ್ವಿ ಉಸ್ತುವಾರಿಯಲ್ಲಿ ಸರಸ್ವತಿಪುರಂ ಪೆÇಲೀಸ್ ಠಾಣೆ ಪಿಐ ಆರ್.ವಿಜಯಕುಮಾರ್, ಕುವೆಂಪುನಗರ ಪೆÇಲೀಸ್ ಠಾಣೆಯ ಪಿಐ ಜಿ.ಸಿ.ರಾಜು, ಸರಸ್ವತಿಪುರಂಪೆÇಲೀಸ್ ಠಾಣೆ ಪಿಐ ಎನ್. ಭವ್ಯ, ಅಪರಾಧ ವಿಭಾಗದ ಸಿಬ್ಬಂದಿ ಎಎಸ್ ಐ ಕರುಣಾಕರ, ಬಸವರಾಜೇ ಅರಸ್, ಪ್ರಕಾಶ್, ರಾಘವೇಂದ್ರ, ಅರ್ಜುನ್, ಕುಮಾರ್, ಹರೀಶ್ ಕುಮಾರ್, ನಟರಾಜ ಮತ್ತು ಕೆ.ಆರ್.ಉಪವಿಭಾಗದ ಅಪರಾದ ಪತ್ತೆದಳದ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.