ಮೈಸೂರು: ಒಕ್ಕಲಿಗರರಿಗೆ ಸಿದ್ದರಾಮಯ್ಯ ಅವರಿಂದ ರಕ್ಷಣೆ ಸಿಕ್ಕಿಲ್ಲ ಎಂದು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ದೂರಿದರು.
ನಗರದಲ್ಲಿ ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಮೈಸೂರು ಜಿಲ್ಲೆಯಲ್ಲಿ ಒಕ್ಕಲಿಗರಿಗೆ ರಕ್ಷಣೆ ಇಲ್ಲ ಅಂತಾ ಡಿಕೆ ಶಿ ಹೇಳಿದ್ದಾರೆ,ಅಂದರೆ ಒಕ್ಕಲಿಗರರಿಗೆ ಸಿದ್ದರಾಮಯ್ಯ ರಿಂದ ರಕ್ಷಣೆ ಸಿಕ್ಕಿಲ್ಲ,ಅವರಿಂದ ಅನ್ಯಾಯವಾಗಿದೆ ಅಂತಾ ಶಿವಕುಮಾರ್ ಒಪ್ಪಿಕೊಂಡಂತಾಗಿದೆ ಎಂದರು.
ಈ ಚುನಾವಣೆಯಲ್ಲಿ 85 ರಿಂದ 90 ರಷ್ಟು ಒಕ್ಕಲಿಗರರು ಮೈತ್ರಿ ಪರ ಇದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಯಾವತ್ತೂ ಬೇರೆ ಸಮಾಜದ ನಾಯಕರ ಏಳಿಗೆ ಸಹಿಸಿಲ್ಲ. ಸಿಎಂ ಆಗಲು ತಮಗೆ ಅಡ್ಡಿಯಾಗುತ್ತಾರೆ ಅಂತಾ ಪರಮೇಶ್ವರ್ ಸೋಲಿಸಿದ್ದು ಯಾರು ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಮಲ್ಲಿಕಾರ್ಜುನ ಖರ್ಗೆ ಕರ್ನಾಟಕ ಖಾಲಿ ಮಾಡದೆ ಇದ್ದರೆ ಬಿಜೆಪಿ ಗೆ ಹೋಗ್ತಿನಿ ಅಂತಾ ಕಾಂಗ್ರೆಸ್ ಹೈಕಮಾಂಡ್ ಗೆ ಸಿದ್ದರಾಮಯ್ಯ ಬೆದರಿಸಿದ್ದರು ಎಂದು ಹೆಚ್ಡಿ ಕೆ ಹೊಸ ಬಾಂಬ್ ಸಿಡಿಸಿದರು.
ನಾನೇಕೆ ಸ್ವಾಮೀಜಿ ಫೋನ್ ಟ್ಯಾಪ್ ಮಾಡಲಿ ಅವರ ಮೇಲೆ ಅನುಮಾನ ಇದ್ದಿದ್ದರೆ ಅವರ ಜೊತೆ ಯಾಕೆ ನಾನು ಅಮೆರಿಕಾಗೆ ಹೋಗ್ತಿದ್ದೆ. ಯಾರು ನನಗೆ ಸರಕಾರ ಬೀಳುತ್ತೆ ಅಂತಾ ಹೇಳಿರಲಿಲ್ಲ. ನೀವು ಅರಾಮಾಗಿ ಹೋಗಿ ಬನ್ನಿ ಅಂತಾ ಹೇಳಿ ಕಳುಹಿಸಿದ್ದರು. ನಾನು ಯಾರ ಫೋನ್ ಕೂಡ ಟ್ಯಾಪ್ ಮಾಡಿಸಿಲ್ಲ ಎಂದು ಪಗರಶ್ನೆಯೊಂದಕ್ಕೆ ಉತ್ತರಿಸಿದರು.
1996 ರಲ್ಲಿ ಚುನಾವಣೆ ಗೆ ನಿಂತಾಗ ಸಿಂಧ್ಯಾ ಅವರಿಗೆ ನಾನು ಕಪಾಳ ಮೋಕ್ಷ ಮಾಡಿದೆ ಅಂತಾ ಸುಳ್ಳು ಸುದ್ದಿ ಹಬ್ಬಿಸಿದರು. ಈ ಥರ ರಾಜಕಾರಣ ಶಿವಕುಮಾರ್ ಗೆ ರಕ್ತಗತವಾಗಿ ಬಂದಿದೆ. ಸುಳ್ಳು ಹೇಳಿಕೊಂಡೆ ರಾಜಕಾರಣ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿ ಮುಕ್ಕಾಲು ಗಂಟೆ ಭಾಷಣ ದಿಂದ ಯಾವ ಪರಿವರ್ತನೆಯೂ ಆಗಲ್ಲ. ನನ್ನ ಸೋಲು ಗೆಲುವು
ಶಿವಕುಮಾರ್ ಕೈಲಿ ಇದಿಯಾ ಹಣದ ದುರಹಂಕಾರ, ದರ್ಪ ದಿಂದ ನಾನು ಸೋಲ್ತಿನಿ ಅಂತಾ ಅವರು ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಟಾಂಗ್ ನೀಡಿದರು.