ಬೆಂಗಳೂರು: ಶ್ರೀರಾಮನವಮಿ ಆಚರಿಸಿ ಯುವಕರು ಕಾರಿನಲ್ಲಿ ಹೋಗುತ್ತಿದ್ದಾಗ ಕಾರು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ನಾಲ್ಕು ಮಂದಿ ಈಗ ಅಂದರ್ ಆಗಿದ್ದಾರೆ.
ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಫರ್ಮಾನ್, ಸಮೀರ್ ಹಾಗೂ ಇಬ್ಬರು ಅಪ್ರಾಪ್ತರು ಕಿರಿಕ್ ಮಾಡಿ ಇದೀಗ ಬಂಧನದಲ್ಲಿದ್ದಾರೆ.
ಮೂವರು ಯುವಕರು ಶ್ರೀರಾಮನವಮಿ ಕಾರ್ಯಕ್ರಮ ಮುಗಿಸಿಕೊಂಡು ಸಂಜೆ ಕಾರಿನಲ್ಲಿ ಶ್ರೀರಾಮನ ಬಾವುಟ ಹಿಡಿದು ಜೈ ಶ್ರೀರಾಮ್ ಎಂದು ಕೂಗುತ್ತಾ ವಿದ್ಯಾರಣ್ಯಪುರದ ಬೆಟ್ಟಳ್ಳಿ ಮಸೀದಿ ಮಾರ್ಗವಾಗಿ ಹೋಗುತ್ತಿದ್ದರು.
ಆಗ ಈ ನಾಲ್ಕು ಮಂದಿ ಏಕಾಏಕಿ ಕಾರು ಅಡ್ಡಗಟ್ಟಿ ಜೈ ಶ್ರೀರಾಮ್ ಬದಲು ಅಲ್ಲಾ ಹೂ ಅಕ್ಬರ್ ಎಂದು ಕೂಗುವಂತೆ ಒತ್ತಾಯಿಸಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಕಾರಿನಲ್ಲಿದ್ದ ಯುವಕರು ವಿರೋಧಿಸಿದ್ದಾರೆ ಆಗ ನಾಲ್ವರು ಸೇರಿ ಹಲ್ಲೆ ನಡೆಸಿ ಬೈಯ್ದಿದ್ದಾರೆ. ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು ವಿದ್ಯಾರಣ್ಯಪುರ ಪೊಲೀಸರು ದೂರು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.