ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ನಟಿ ಸಂಜನಾ ಜೈಲು ಪಾಲಾಗಿದ್ದಾರೆ.
ಸಂಜನಾರನ್ನು 2 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬುಧವಾರ ಸಿಸಿಬಿ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಪೆÇಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ ಡ್ರಗ್ಸ್ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಸಂಜನಾರನ್ನು 1ನೇ ಎಸಿಎಂಎಂ ಕೋರ್ಟ್ಗೆ ಹಾಜರುಪಡಿಸಿದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಸಂಜನಾರನ್ನು 2 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಸಂಜನಾರನ್ನು ಬೆಳಗ್ಗೆ ಕೆಸಿ ಜನರಲ್ ಆಸ್ಪತ್ರಗೆ ಕರೆತಂದು ವೈದ್ಯಕೀಯ ಪರೀಕ್ಷೆ, ಕೊರೊನಾ ಟೆಸ್ಟ್ ನಡೆಸಲಾಯಿತು.
ನಂತರ ಸಾಂತ್ವನ ಕೇಂದ್ರಕ್ಕೆ ಕರೆತಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ವಿಚಾರಣೆ ವೇಳೆ ಸಿಸಿಬಿ ಪೆÇಲೀಸರು ಕಸ್ಟಡಿಗೆ ನೀಡುವಂತೆ ಕೇಳಿರಲಿಲ್ಲ. ಹಾಗಾಗಿ ಕೋರ್ಟ್ ಸಂಜನಾರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಸೋಮವಾರ ನಟಿ ರಾಗಿಣಿಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿತು.
ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ 2ನೇ ನಟಿ ಆಗಿದ್ದಾರೆ ಸಂಜನಾ.
ಇದೇ ಅವಧಿಯಲ್ಲಿ ನ್ಯಾಯಾಧೀಶರು ಇತರೆ ಆರೋಪಿಗಳಾದ ವೀರೇನ್ ಖನ್ನಾ, ರವಿಶಂಕರ್ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.