ಮೈಸೂರು: ಪೆನ್ ಡ್ರೈವ್ ಹಂಚಿದ್ದಾನೆನ್ನಲಾದ ಪ್ರಜ್ವಲ್ ರೇವಣ್ಣ ಕಾರಿನ ಮಾಜಿ ಚಾಲಕ ಕಾರ್ತಿಕ್ ನನ್ನು ಹೊರ ದೇಶಕ್ಕೆ ಕಳಿಸಿದ್ದು ಕಾಂಗ್ರೆಸಿಗರು ಎಂದು ಶಾಸಕ ಜಿ.ಟಿ. ದೇವೇಗೌಡ ಆರೋಪಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಪಣೆ ಪಡೆದು ಕಾರ್ತಿಕ್ ಪೆನ್ ಡ್ರೈವ್ ಹಂಚಿದ್ದಾನೆ ಎಂದು ದೂರಿದರು.
ಪೆನ್ ಡ್ರೈವ್ ಪ್ರಕರಣದಲ್ಲಿ ಯಾರನ್ನೂ ಬಂಧಿಸಬೇಕು, ಯಾರನ್ನು ಎ.1 ಮಾಡಬೇಕು ಯಾರನ್ನು ಎ.2 ಮಾಡಬೇಕು ಎಂಬ ನಿರ್ದೇಶನವನ್ನು ಸಿಎಂ ಹಾಗೂ ಡಿಸಿಎಂ ಮಾಡಿದ್ದಾರೆ ಎಂದು ಹೇಳಿದರು.
ಈ ಪ್ರಕರಣದ ಸತ್ಯಾಸತ್ಯತೆ ಹೊರ ಬರಲು ಹಾಲಿ ನ್ಯಾಯಾಧೀಶರ ಮೂಲಕ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಜಿಟಿಡಿ ಆಗ್ರಹಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಈ ವಿಚಾರದ ಸಂಪೂರ್ಣ ನೇತೃತ್ವ ವಹಿಸಿದ್ದಾರೆ,ಅವರು ಇದರಲ್ಲಿ ತಪ್ಪಿಸ್ಥರ ರೀತಿ ಕಾಣುತ್ತಿದ್ದಾರೆ,ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವೆ ಸರಕಾರ ಅವರನ್ನು ವಜಾ ಮಾಡಬೇಕು ಎಂದು ಜಿ.ಟಿ.ದೇವೇಗೌಡ ಒತ್ತಾಯಿಸಿದರು.