ಮೈಸೂರು ಪಾಲಿಕೆ ಅಧಿಕಾರಿಗಳ ದಾಳಿ:1513 ಕೆಜಿ ಪ್ಲಾಸ್ಟಿಕ್ ವಶ 

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುವ ಉದ್ಯಮಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಪಾಲಿಕೆ ಅಧಿಕಾರಿಗಲಕು 9 ವಲಯ ಕಚೇರಿ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ, ಒಟ್ಟು 1513 ಕೆಜಿ ನಿಷೇಧಿತ ಪ್ಕಾಸ್ಟಿಕ್ ವಶಪಡಿಸಿಕೊಂಡು 1,61,000 ರೂ ದಂಡ ವಿಧಿಸಿದರು.

ಧನ್ವಂತ್ರಿ ರಸ್ತೆಯಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಿದಾಗ 1400kg ನಿಷೇಧಿತ ಪ್ಲಾಸ್ಟಿಕ್ ಸಂಗ್ರಹಿಸಿರುವುದು ಪತ್ತೆಯಾಗಿದೆ.

ಪಾಲಿಕೆ ಆಯುಕ್ತರ ಆದೇಶದಂತೆ ವಲಯ ಆಯುಕ್ತರ ನೇತೃತ್ವದಲ್ಲಿ ದಾಳಿ ನಡೆಯಿತು, ಸಂತೆಪೇಟೆಯ ಮಲ್ಲೇಶ್ ಎಂಬ ಮಾಲೀಕರಿಗೆ ಸೇರಿದ ದನ್ವಂತ್ರಿ ಎಂಟರ್ಪ್ರೈಸಸ್ ಗೋದಾಮಿನ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು  ವಶಪಡಿಸಿಕೊಂಡು 25,000 ರೂ ದಂಡ ವಿಧಿಸಲಾಯಿತು,ಜತೆಗೆ ಅಂಗಡಿಯ ಟ್ರೇಡ್ ಲೈಸನ್ಸ್ ರದ್ದುಪಡಿಸಲು ಆದೇಶ ನೀಡಿದರು.

ದಾಳಿ ವೇಳೆ ಪರಿಸರ ಅಭಿಯಂತರರಾದ ಮೈತ್ರಿ, ಹೆಲ್ತ್ ಇನ್ಸ್‌ಪೆಕ್ಟರ್ ಗಳಾದ ಕೃಷ್ಣ ,ಧನಂಜಯ ಗೌಡ,ಮಂಜು ಕುಮಾರ್,  ಬಸವರಾಜು, ಸ್ಯಾನಿಟರಿ ಸೂಪರ್ವೈಸರ್ ಗಳು, ಅಭಯ ತಂಡ ಮತ್ತು ಪೋಲಿಸ್ ಸಿಬ್ಬಂದಿ ಹಾಜರಿದ್ದರು.