ಟ್ರ್ಯಾಕ್ಟರ್ ರೋಟರಿಗೆ ಸಿಲುಕಿ ಬಾಲಕ ದುರ್ಮರಣ

ಮೈಸೂರು: ಟ್ರ್ಯಾಕ್ಟರ್ ರೋಟರಿಗೆ ಸಿಲುಕಿ ಬಾಲಕ ಮೃತಪಟ್ಟ ಹೃದಯವಿದ್ರಾವಕ ಘಟನೆ ನಂಜನಗೂಡು ತಾಲೂಕಿನ ದೇವರಸನಹಳ್ಳಿ ಯಲ್ಲಿ ನಡೆದಿದೆ.

ಎಂಟು ವರ್ಷದ ಭವಿಷ್‌ ಮೃತಪಟ್ಟ ಬಾಲಕ,ಬಾಲಜನ ನಿಧನದಿಂದ ಕುಟುಂಬದವರ ದುಃಖ ಹೇಳತೀರದಾಗಿದೆ.

ಶಾಲೆ ರಜಾ ಹಿನ್ನೆಲೆಯಲ್ಲಿ ಅಜ್ಜಿ ಮನೆಗೆ ಬಂದಿದ್ದ ಭವಿಷ್ ಟ್ರ್ಯಾಕ್ಟರ್ ನಿಂದ ಬಿದ್ದು ರೋಟರಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.

ಬಾಲಕನ ತಾಯಿ ಮಮತಾ ದೇವರಸನ ಹಳ್ಳಿಯಿಂದ ಚಾಮರಾಜನಗರಕ್ಕೆ ಮದುವೆಯಾಗಿದ್ದಾರೆ.

ಶಾಲೆಗೆ ರಜೆ ಇದ್ದುದರಿಂದ ತಮ್ಮ ಇಬ್ಬರು ಮಕ್ಕಳೊಂದಿಗೆ ತವರೂರು ದೇವರಸನಹಳ್ಳಿಗೆ ಬಂದಿದ್ದಾರೆ.

ಮೃತ ಬಾಲಕನ ಸೋದರ ಮಾವ ತಂಗಿಯ  ಮಕ್ಕಳನ್ನು ಜಮೀನಿಗೆ ಕರೆದುಕೊಂಡು ಹೋಗಿದ್ದರು.

ಜಮೀನಿನಲ್ಲಿ ಉಳುಮೆ ಮಾಡುವ ಸಂದರ್ಭ ಬಾಲಕ ಭವಿಷ್ ಹಾಗೂ ಆತನ ಸಹೋದರಿಯನ್ನು ಟ್ರ್ಯಾಕ್ಟರ್ ಮೇಲೆ ಕೂರಿಸಿದ್ದರಂತೆ.

ಟ್ರಾಕ್ಟರ್ ಉಳುಮೆ ಮಾಡುವಾಗ ಭವಿಷ್ ಟ್ರ್ಯಾಕ್ಟರ್ ನಿಂದ ಆಯತಪ್ಪಿ ಕೆಳಗೆ ಬಿದ್ದು ರೋಟರಿಗೆ ಸಿಲುಕಿ ಮೃತ ಪಟ್ಟಿದ್ದಾನೆ.

ಬಾಲಕನ ದೇಹ ತುಂಡು,ತುಂಡಾಗಿದ್ದು ಸ್ಥಳೀಯರು ಕೂಡಾ ತೀವ್ರ ದುಖ ವ್ಯಕ್ತಪಡಿಸಿದರು.