ವಿಧಾನ ಪರಿಷತ್ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ:ಮಹದೇವಪ್ಪ ವಿಶ್ವಾಸ

ಮೈಸೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಸಚಿವ ಡಾ. ಹೆಚ್.ಸಿ ಮಹದೇವಪ್ಪ ವಿಶ್ವಾಸ‌ ವ್ಯಕ್ತಪಡಿಸಿದರು.

ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ‌ ಅವರು,ನಾವು ಈ ಚುನಾವಣೆಯನ್ನು ಗೆದ್ದೇ ಗೆಲ್ಲುತ್ತೇವೆ

ಜೆಡಿಎಸ್ ಬಿಜೆಪಿ ಮೈತ್ರಿಯಿಂದ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ತಿಳಿಸಿದರು.

ಯತಿಂದ್ರ ಸಿದ್ದರಾಮಯ್ಯ ವಿಧಾನ ಪರಿಷತ್ ಸದಸ್ಯರಾಗುವ ವಿಚಾರಕ್ಕೆ ಪ್ರತಿಕ್ರಿಸಿದ ಸಚಿವರು,ಕಳೆದ ಚುನಾವಣೆಯಲ್ಲಿ ಯತೀಂದ್ರ ಕ್ಷೇತ್ರವನ್ನು ತಂದೆಯಾಗಿ ತ್ಯಾಗ ಮಾಡಿದ್ದಾರೆ,ಹೈ ಕಮಾಂಡ್ ಆಗ ನೀವು ಸ್ಪರ್ಧೆ ಮಾಡಬೇಡಿ,ನಿಮ್ಮ ತಂದೆ ಸ್ಪರ್ಧೆ ಮಾಡಲಿ ಎಂದು ಹೇಳಿದ್ದರು

ಅದಕ್ಕೆ ಅವರು ಒಪ್ಪಿ ಕ್ಷೇತ್ರ ಬಿಟ್ಟುಕೊಟ್ಟಿದ್ದರು ಎಂದು ಹೇಳಿದರು.

ಯತಿಂದ್ರ ಅವರು ವಿಧಾನ ಪರಿಷತ್ ಸದಸ್ಯರಾಗುವ ಕುರಿತು ಹೈ ಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

ನಮ್ಮದೇ ಸರ್ಕಾರ ಇರುವ ಕಾರಣ ವಿಧಾನ ಪರಿಷತ್ ಗೆ ಲಾಭಿ ಹೆಚ್ಚಾಗಿದೆ ಅದು ಇದ್ದೇ ಇರುತ್ತದೆ ಅರ್ಹರಿಗೆ ಸ್ಥಾನ ಸಿಗುತ್ತದೆ ಎಂದು ಮಹದೇವಪ್ಪ ತಿಳಿಸಿದರು.