ತಾಯಿ ಮಕ್ಕಳಿಗೆ ಅನ್ಯಾಯ ಮಾಡೋದಿಲ್ಲ -ಶಾಸಕ ರಾಮದಾಸ್

ಮೈಸೂರು 18: ತಾಯಿ ಮಕ್ಕಳಿಗೆ ಅನ್ಯಾಯ ಮಾಡೋದಿಲ್ಲ ಎಂದು ಶಾಸಕ ಎಸ್.ಎ. ರಾಮದಾಸ್ ಹೇಳಿದರು.
ನಗರದಲ್ಲಿ ಶುಕ್ರವಾರ ರಾಮದಾಸ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸಚಿವ ಸಂಪುಟ ವಿಸ್ತರಣೆ ಸಂಬಂಧ ಶಾಸಕ ಎಸ್.ಎ.ರಾಮದಾಸ್ ಪ್ರತಿಕ್ರಿಯಿಸಿ, ತಾಯಿ ಮಕ್ಕಳಿಗೆ ಎಂದೂ ಮೋಸ ಮಾಡಲ್ಲ ಎಂದರು.
ಅತಿಥಿಗಳಿಗೆ ಊಟ ಹಾಕಬೇಕೋ ಮನೆಯವರಿಗೆ ಊಟ ಹಾಕಬೇಕೋ ಎಂಬುದನ್ನು ಮನೆಯ ಯಜಮಾನ ತೀರ್ಮಾನ ಮಾಡುತ್ತಾನೆ ಎಂದು ರಾಮದಾಸ್ ಮಾರ್ಮಿಕವಾಗಿ ನುಡಿದರು.
ಸಚಿವ ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಬೀಡಬೇಕು ಎಂಬುದನ್ನು ನಿರ್ಧಾರ ಮಾಡೋದು ಕ್ಯಾಪ್ಟನ್. ಪಕ್ಷದ ಹಿರಿಯರಾಗಿ ಏನು ಮಾಡಬೇಕೆಂಬುದು ಅವರಿಗೆ ಗೊತ್ತಿದೆ ಎಂದರು.
ನಾನು ಪಕ್ಷದ ಅತ್ಯಂತ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿರ್ವಹಿಸಲು ಸಿದ್ಧ ಎಂದು ಶಾಸಕ ರಾಮದಾಸ್ ಹೇಳಿದರು.