ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ವರ್ಧಂತಿ: ವಿಕಲಚೇತನರಿಗೆ ಉಪಕರಣ‌ ವಿತರಣೆ

ಮೈಸೂರು: ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 82 ನೇ ವರ್ಧಂತಿ ಪ್ರಯುಕ್ತ ವಿಶೇಷ ಚೇತನರಿಗೆ ಅಗತ್ಯ ಉಪಕರಣಗಳನ್ನು ವಿತರಿಸಲಾಯಿತು.

ನಾದಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಣಪತಿ ಶ್ರೀಗಳು ವಿಕಲಚೇತನರ ಬಳಿಗೆ ಹೋಗಿ ಅವರ ಆರೋಗ್ಯ ವಿಚಾರಿಸಿ ಸಲಕರಣೆ ವಿತರಿಸಿದರು.

ಈ‌ ವೇಳೆ ಆಶೀರ್ವಚನ ನೀಡಿದ ಸ್ವಾಮೀಜಿಯವರು ವಿಕಲಚೇತನರನ್ನು ನೋಡಿಕೊಳ್ಳುವುದು ಒಂದು ಪುಣ್ಯದ ಕೆಲಸ ಅವರನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ಆಶೀರ್ವದಿಸಿದರು.

ಇಂಥವರ ಸೇವೆ ಮಾಡುವುದು ನಿಜಕ್ಕೂ ಗ್ರೇಟ್, ಅವರ ಸೇವೆಯನ್ನು ಎಷ್ಟು ಶ್ಲಾಘಿಸಿದರೂ ಸಾಲದು,ಸರ್ಕಾರ ಇಂತಹ ವಿಕಲಚೇತನರನ್ನು ಗುರುತಿಸಿ ನಮಗೆ ಮಾಹಿತಿ ನೀಡಿರುವುದಕ್ಕೆ ಸರ್ಕಾರಕ್ಕೂ ಧನ್ಯವಾದ‌ ಸಲ್ಲಿಸುತ್ತೇನೆ ಎಂದು ಹೇಳಿದರು.

ಎಲ್ಲಾ ವಿಕಲಚೇನರಿಗೂ ದೇವರು ಆಯಸ್ಸು ಆರೋಗ್ಯ ಕೊಟ್ಟು ಒಳ್ಳೆಯದು ಮಾಡಲಿ ಭಕ್ತರಿಗೂ ಒಳಿತಾಗಲಿ ಎಂದು ಶ್ರೀ ಗಳು ಆಶೀರ್ವಚನ ನೀಡಿದರು.

40 ವ್ಹೀಲ್‌ಚೇರ್ಸ್,8ವಾಕರ್ಸ್, 10ಕ್ರಚರ್ಸ್,5 ಸ್ಟಿಕ್ ಗಳು ಸೇರಿ ಒಟ್ಟು 82 ಉಪಕರಣಗಳನ್ನು ವಿಕಲಚೇತನರಿಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ವಿತರಿಸಿದರು.

ಇದಕ್ಕೂ ಮೊದಲು ದತ್ತ ಹ್ಯೂಮನ್ ಸರ್ವೀಸಸ್ ಸ್ವಯಂಸೇವಕರ ಸಂಘದ ವತಿಯಿಂದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ ಗಾರ್ಡ್ ಆಫ್ ಹಾನರ್ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಶ್ರೀಗಳು‌,ಸ್ವಯಂ‌ಸೇವೆ‌ ಅತ್ಯಂತ ಪ್ರಮುಖ ಹಾಗೂ ಶ್ಲಾಘನೀಯವಾದುದು ಎಂದು ಹೇಳಿದರು.