ಮೇಕೆ ಮೇಯಿಸುತ್ತಿದ್ದ ಮಹಿಳೆ ಹೊತ್ತೊಯ್ದ ಹುಲಿ

ಮೈಸೂರು: ಮೇಕೆಗಳನ್ನ ಮೇಯಿಸುತ್ತಿದ್ದ ಮಹಿಳೆ ಮೇಲೆ ಹುಲಿ ದಾಳಿನಡೆಸಿ ಹೊತ್ತೊಯ್ದ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆಯಲ್ಲಿ ನಡೆದಿದೆ.

ತಾಲೂಕಿನ ಮೂರ್ಬಾಂದ್ ಬೆಟ್ಟದ ಸಮೀಪ ಶನಿವಾರ ಸಂಜೆ ಘಟನೆ ನಡೆದಿದ್ದು ವಾಚ್ ಟವರ್ ಮೇಲೆ ಮಹಿಳೆಯ ರಕ್ತಸಿಕ್ತ ಮೃತ ದೇಹ ದೊರೆತಿದೆ.

ಎನ್.ಬೇಗೂರು ಸಮೀಪದ ಮಾಳದ ನಿವಾಸಿ ಚಿಕ್ಕಿ(48) ಹುಲಿಗೆ ಬಲಿಯಾದ ಮಹಿಳೆ.

ಈಕೆಯ ಜೊತೆ ಇದ್ದ ವ್ಯಕ್ತಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾನೆ, ಸ್ಥಳಕ್ಕೆ ಎನ್.ಬೇಗೂರು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಎಚ್.ಡಿ.ಕೋಟೆ ತಾಲೋಕಿನ ಅಂತರಸಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.