ಮಂಡ್ಯ ಜಿಲ್ಲೆಲಿ ಮತ್ತೊಂದು ದೇಗುಲದಲ್ಲಿ ದರೋಡೆ

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ದೇಗುಲದಲ್ಲಿ ದರೋಡೆ ನಡೆದಿದೆ.
ಜಿಲ್ಲೆಯ ಮದ್ದೂರು ತಾಲೂಕಿನ ಕೆ. ಶೆಟ್ಟಹಳ್ಳಿ ಗ್ರಾಮದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ.
ದೇಗುಲದ ಬಾಗಿಲು ಮುರಿದು ಕಳ್ಳರು ಒಳ ನುಗ್ಗಿ ದರೋಡೆ ಮಾಡಿದ್ದಾರೆ.
ದೇವಾಲಯದ ಒಳಗಿದ್ದ ಹುಂಡಿಯನ್ನು ದರೋಡೆಕೋರರು ಹೊತ್ತೋಯ್ದಿದ್ದಾರೆ.
ದರೋಡೆಕೋರರ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ನಾಲ್ಕೈದು ಮಂದಿಯ ತಂಡದಿಂದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ದರೋಡೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆ.ಎಂ.ದೊಡ್ಡಿ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.
ಕಳೆದ ವಾರವಷ್ಟೆ ಮಂಡ್ಯದಲ್ಲಿ 3 ಮಂದಿ ಅರ್ಚಕರನ್ನು ಕೊಂದು ನಡೆದಿದ್ದ ದೇಗುಲ ದರೋಡೆ ಪ್ರಕರಣ ಇನ್ನೂ ಹಚ್ಚ ಹಸಿರಾಗಿ ಇರುವಾಗಲೇ ಮತ್ತೊಂದು ದೇಗುಲದಲ್ಲಿ ದರೋಡೆ ನಡೆದಿರುವುದು ಜನರಲ್ಲಿ ಆತಂಕ ಮೂಡಿಸಿದೆ.