ರಘುಪತಿ ಭಟ್ಟರಿಗೆ ಎಂಎಲ್‌ಸಿ ಟಿಕೆಟ್‌ ನೀಡದ್ದಕ್ಕೆ ಪ್ರತಾಪ್‌ ಸಿಂಹ ಬೇಸರ

ಮೈಸೂರು: ಉಡುಪಿಯ ಮಾಜಿ ಶಾಸಕ ರಘುಪತಿ ಭಟ್‌ ಅವರಿಗೆ ಎಂಎಲ್‌ಸಿ ಟಿಕೆಟ್‌ ನೀಡದ್ದಕ್ಕೆ ಪರೋಕ್ಷವಾಗಿ ಮೈಸೂರು ಸಂಸದ ಪ್ರತಾಪ್‌ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉಡುಪಿ ಶಾಲೆಯೊಂದರಲ್ಲಿ ಬುರ್ಖಾ ಧರಿಸಿ ಕ್ಲಾಸಿಗೆ ಬಂದ ಜಿಹಾದಿ ಮನಸ್ಥಿತಿ ವಿರುದ್ಧ ಹೋರಾಡಿದ ರಘುಪತಿ ಭಟ್ಟ ಅವರಿಗೆ ವಿಧಾನಸಭೆಗೆ ಸ್ಪರ್ಧಿಸಲು ಬಿಡಲಿಲ್ಲಾ ಎಂಎಲ್‌ಸಿ ಟಿಕೆಟ್ಟನ್ನೂ ಕೊಡಲಿಲ್ಲ,ಜತೆಗೆ ಪಕ್ಷದಿಂದಲೇ ಉಚ್ಛಾಟನೆ ಮಾಡಲಾಗಿದೆ.

ಬುರ್ಖಾ ಸ್ಟೂಡೆಂಟ್ ಅಸ್ಸಾದಿಯಿಂದ ಗೇಲಿಗೆ ಒಳಗಾಗುವ ಪರಿಸ್ಥಿತಿ ಹಿಂದುತ್ವವಾದಿಗಳಿಗೆ ಬಂದಿದ್ದು ದುರದೃಷ್ಟಕರ ಎಂದು ಸಾಮಾಜಿಕಜಾಲತಾಣದಲ್ಲಿ ಪ್ರತಾಪ್ ಸಿಂಹ ಅಸಮಾಧಾನ ಹೊರಹಾಕಿದ್ದಾರೆ.     

ಎಂಎಲ್‌ಎ ಟಿಕೆಟ್‌ ನೀಡದ ಕಾರಣ ಈ ಬಾರಿ ಪದವೀಧರ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್‌ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ರಘುಪತಿ ಭಟ್ಟರಿದ್ದರು.

ಆದರೆ ಈ ಟಿಕೆಟ್‌ ಕೈ ತಪ್ಪಿದ ಕಾರಣ ಪಕ್ಷೇತರವಾಗಿ ಕಣಕ್ಕೆ ಇಳಿದಿದ್ದಾರೆ, ಪಕ್ಷೇತರವಾಗಿ ಕಣಕ್ಕೆ ಇಳಿದಿದ್ದಕ್ಕೆ ಬಿಜೆಪಿ  ರಘುಪತಿ ಭಟ್ಟರನ್ನು ಪಕ್ಷದಿಂದ 6 ವರ್ಷ ಉಚ್ಚಾಟನೆ ಮಾಡಿದೆ ಎಂದು ಬೇಸರ‌ ವ್ಯಕ್ತ ಪಡಿಸಿದ್ದಾರೆ.