ನವದೆಹಲಿ: ತಮಿಳುನಾಡು ಬಿಜೆಪಿ ಮುಖ್ಯಸ್ಥ ಮತ್ತು ಪಕ್ಷದ ಫೈರ್‌ಬ್ರಾಂಡ್ ನಾಯಕ ಕೆ ಅಣ್ಣಾಮಲೈ ಅವರು ಕೊಯಮತ್ತೂರು ಕ್ಷೇತ್ರದ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ.
2024 ರ ಲೋಕಸಭಾ ಚುನಾವಣೆಗೆ ಗಣಪತಿ ರಾಜ್‌ಕುಮಾರ್. ಪಿ (ಡಿಎಂಕೆ), ಅಣ್ಣಾಮಲೈ ಕೆ (ಬಿಜೆಪಿ), ಮತ್ತು ಸಿಂಗೈ ಜಿ ರಾಮಚಂದ್ರನ್(ಎಐಎಡಿಎಂಕೆ)
ಸ್ಪರ್ಧಿಸಿದ್ದರು.
ಫಲಿತಾಂಶ ಹೊರಬಂದಿದ್ದು, ತಮಿಳುನಾಡು ಬಿಜೆಪಿ ಮುಖ್ಯಸ್ಥ ಮತ್ತು ಕರ್ನಾಟಕದ ಪೊಲೀಸ್ ಅಧಿಕಾರಿಯಾಗಿದ್ದ ಕೆ ಅಣ್ಣಾಮಲೈ ಅವರು 15 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ.
ಅಣ್ಣಾಮಲೈ ಅವರನ್ನು ಡಿಎಂಕೆ ಅಭ್ಯರ್ಥಿ ಗಣಪತಿ ರಾಜ್‌ಕುಮಾರ್. ಪಿ ಅವರು ಮಣಿಸಿದ್ದಾರೆ.
ಇಂದು ಅಣ್ಣಾಮಲೈ ಅವರ ಜನ್ಮದಿನ, ಆದರೆ ಅವರು ಚುನಾವಣೆಯಲ್ಲಿ ಸೋಲುವ ಮೂಲಕ ಕಹಿ ಅನುಭವಿಸಬೇಕಾಗಿದೆ.