ಡಾ. ಸಿ.ಎನ್ ಮಂಜುನಾಥ್ ಗೆ ಭಾರಿ ಗೆಲುವು

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಡಾ. ಸಿ.ಎನ್ ಮಂಜುನಾಥ್ ಅವರು ಭಾರಿ ಗೆಲುವು ಸಾಧಿಸಿದ್ದಾರೆ.

ಡಾ. ಮಂಜುನಾಥ್ ಅವರು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಸಹೋದರ ಡಿ.ಕೆ ಸುರೇಶ್ ಅವರನ್ನು ಮಣಿಸಿದ್ದಾರೆ.

ಮಂಜುನಾಥ್ ಅವರು‌ 1.90 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು,ಈ‌ ಗೆಲುವು ಡಿಕೆ ಬ್ರದರ್ಸ್‌ ಗೆ ಮುಖಭಂಗವಾದಂತಾಗಿದೆ.