ಬೆಂಗಳೂರು: ತೆಲುಗು ನಟಿ ಹೇಮಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಬೆಂಗಳೂರಿನ ರೇವ್ ಪಾರ್ಟಿ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಹೇಮಾಗೆ ಮತ್ತೊಂದು ಕಷ್ಟ ಎದುರಾಗಿದೆ, ಕೇಸ್ ಇತ್ಯರ್ಥ ಆಗುವವರೆಗೆ ತೆಲುಗು ಕಲಾವಿದರ ಸಂಘದಿಂದ ಹೇಮಾರನ್ನು ಅಮಾನತು ಮಾಡಲಾಗಿದೆ.
ಬೆಂಗಳೂರಿನ ರೇವ್ ಪಾರ್ಟಿ ವಿಚಾರ ಬೆಳಕಿಗೆ ಬಂದ ದಿನದಿಂದ ತಾವು ಹೈದರಾಬಾದ್ನಲ್ಲಿರೋದಾಗಿ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು.
ಈ ವೇಳೆ ತೆಲುಗು ಕಲಾವಿದರ ಸಂಘದ ಅಧ್ಯಕ್ಷ ನಟ ಕಮ್ ನಿರ್ಮಾಪಕ ಮಂಚು ವಿಷ್ಣು ಅವರು ಹೇಮಾ ಪರ ಮಾತನಾಡಿದ್ದರು.
ಜೂನ್ 14ರವರೆಗೆ ನಟಿಯನ್ನು ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಒಪ್ಪಿಸಿದ ಬೆನ್ನಲ್ಲೇ ರೇವ್ ಪಾರ್ಟಿ ಪ್ರಕರಣ ಇತ್ಯರ್ಥ ಆಗುವತನಕ ತೆಲುಗು ಕಲಾವಿದರ ಸಂಘದಿಂದ ಹೇಮಾರನ್ನು ಅಮಾನತು ಮಾಡಲಾಗಿದೆ.
ಈ ನಿರ್ಧಾರವನ್ನು ತೆಲುಗು ಕಲಾವಿದರ ಸಂಘದ ಅಧ್ಯಕ್ಷ ಮಂಚು ವಿಷ್ಣು ಕೈಗೊಂಡಿದ್ದಾರೆ.
ಇತ್ತೀಚೆಗೆ ಮಂಚು ವಿಷ್ಣು ಅವರು, ಹೇಮಾ ಅವರು ತಪ್ಪು ಮಾಡಿದ್ದನ್ನು ಪೊಲೀಸರು ಸಾಬೀತುಪಡಿಸಿದರೆ ಖಂಡಿತಾ ಕಲಾವಿದರ ಸಂಘದಿಂದ ಹೇಮಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.