ನೈರುತ್ಯ ರೈಲ್ವೆ ಇಲಾಖೆಯಿಂದ ಯಮನ ವೇಷಧಾರಿ ಬಳಸಿ ಲೆವೆಲ್ ಕ್ರಾಸಿಂಗ್ ಜಾಗೃತಿ

ಮೈಸೂರು: ಮೈಸೂರು ವಿಭಾಗದ ನೈರುತ್ಯ ರೈಲ್ವೆ ವತಿಯಿಂದ ಲೆವೆಲ್ ಕ್ರಾಸಿಂಗ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು

ಈ ವೇಳೆ ಯಮನ ವೇಷಧಾರಿಯನ್ನ ಬಳಸಿಕೊಂಡ ರೈಲ್ವೆ ಇಲಾಖೆ ಲೆವೆಲ್ ಕ್ರಾಸಿಂಗ್ ಸಪ್ತಾಹ ಪ್ರಯುಕ್ತ ಸಾರ್ವಜನಿಕರಿಗೆ ವಿನೂತನವಾಗಿ ಅರಿವು ಮೂಡಿಸಿತು

ಮೈಸೂರಿನ ಜಯನಗರ ರೈಲ್ವೆ ಗೇಟ್ ಬಳಿ ಯಮನ ವೇಷಧಾರಿಯನ್ನ ಬಳಸಿದ ಅಧಿಕಾರಿಗಳು ಅಣುಕು ಪ್ರದರ್ಶನ ಮಾಡುವ ಮೂಲಕ ಜಾಗೃತಿ ಮೂಡಿಸಿದರು.

ರೈಲ್ವೆ ಕ್ರಾಸಿಂಗ್ ವೇಳೆ ಸುರಕ್ಷತೆ ಅನುಸರಿಸುವ ಬಗ್ಗೆ ಜಾಗೃತಿ ಮೂಡಿಸಿದರು.

ರೈಲ್ವೆ ಸ್ಕೌಟ್ಸ್ ವಿಧ್ಯಾರ್ಥಿಗಳನ್ನ ಬಳಸಿ ಅಣುಕು ಪ್ರದರ್ಶನ ನಡೆಸಿದರು.ರೈಲು ಸಮೀಪ ಇರುವ ವೇಳೆ ಬೈಕ್ ನಲ್ಲಿ ನುಸುಳುವ ಪ್ರಯತ್ನ ನಡೆಸುವುದು,ಕಿವಿಗಳಿಗೆ ಏರ್ ಫೋನ್ ಧರಿಸಿ ಹಳಿಗಳನ್ನ ದಾಟುವಾಗ ಹೇಗೆ ಅನಾಹುತ ಸಂಭವಿಸುತ್ತದೆ ಎಂಬ ಬಗ್ಗೆ ಅಣುಕು ಪ್ರದರ್ಶನ ನಡೆಸಿ ಜಾಗೃತಿ ಮೂಡಿಸಿ ಜನರ ಗಮನ ಸೆಳೆಯಲಾಯಿತು.