ಮೂರನೇ‌ ಬಾರಿಗೆ ಮೋದಿ ಯುಗಾರಂಭ

ನವದೆಹಲಿ : ಮೂರನೇ ಬಾರಿಗೆ ದೇಶದಲ್ಲಿ ಮೋದಿ‌ ಯುಗಾರಂಭವಾಗಿದೆ.

ಸತತ ಮೂರನೇ‌ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಿ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಮೋದಿ ಅವರೊಂದಿಗೆ 72 ಸಚಿವರು ಇಂದು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಜವಾಹರಲಾಲ್ ನೆಹರೂ ಬಳಿಕ ಮೂರನೇ ಬಾರಿಗೆ ಮೋದಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದಾರೆ.

72 ಸಚಿವರ ಪೈಕಿ 32 ಕ್ಯಾಬಿನೆಟ್ ಸಚಿವರಾದರೆ, 5 ಸ್ವತಂತ್ರ ಮತ್ತು 36 ರಾಜ್ಯ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ.

73ರ ಹರೆಯದ ಮೋದಿ ಅವರು ಎನ್‌ಡಿಎ ಮೈತ್ರಿಕೂಟದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಧಾನಿ ಮೋದಿಗೆ ಪ್ರಮಾಣ ವಚನ ಬೋಧಿಸಿದರು. ಪ್ರಧಾನಿ ಮೋದಿ ನಂತರ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಪ್ರಮಾಣ ವಚನ ಸ್ವೀಕರಿಸಿದರು

ನಂತರ ನಿತಿನ್ ಗಡ್ಕರಿ, ಜೆಪಿ ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್ ಮತ್ತು ನಿರ್ಮಲಾ‌ ಸೀತಾರಾಮನ್ ಸ್ವೀಕರಿಸಿದರು.

ಕರ್ನಾಟಕಕ್ಕೆ ಐವರು ಸಚಿವರ‌ ಭಾಗ್ಯ ಸಿಕ್ಕಿದೆ.ಮೈತ್ರಿ ಕೂಟದಲ್ಲಿ ಜೆಡಿಎಸ್ ನಿಂದ‌ ಹೆಚ್.ಡಿ.ಕುಮಾರಸ್ವಾಮಿ,ಕರ್ನಾಟಕದಿಂದ‌ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್,ಬಿಜೆಪಿಯಿಂದ ಪ್ರಹ್ಲಾದ್ ಜೋಶಿ,ವಿ.ಸೋಮಣ್ಣ ಹಾಗೂ‌ ಶೋಭಾ ಕರಂದ್ಲಾಜೆ ಪ್ರಮಾಣ ವಚನ ಸ್ವೀಕರಿಸಿದರು.

ಒಟ್ಟು‌ 24 ರಾಜ್ಯಗಳಿಗೆ ಇಂದು ಸಚಿವ ಸ್ಥಾನ ದಕ್ಕಿದಂತಾಗಿದೆ.