ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್,ನಟಿ ಪವಿತ್ರ ಗೌಡ ಸೇರಿ 13 ಮಂದಿಯನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ನ್ಯಾಯಾಧೀಶರಾದ ವಿಶ್ವನಾಥ ಗೌಡರ್ ಅವರು ಈ ಹದಿಮೂರು ಆರೋಪಿಗಳನ್ನೂ ರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದರು.
ರೇಣುಕಾಸ್ವಾಮಿ ಅವರ ಕಿಡ್ನಾಪ್ ಮತ್ತು ಕೊಲೆ ಪ್ರಕರಣದಲ್ಲಿ ಪವಿತ್ರ ಗೌಡ ಎ-1,ದರ್ಶನ್ ಎ-2 ಆರೋಪಿಗಳಾಗಿದ್ದಾರೆ.
ದರ್ಶನ್ ಅವರನ್ನು ಮೈಸೂರಿನಲ್ಲಿ ಬಂಧಿಸಿ ಕರೆತಂದ ಕಾಮಾಕ್ಷಿ ಪಾಳ್ಯ ಪೊಲೀಸರು ನಂತರ ಬೌರಿಂಗ್ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆ ಮಾಡಿಸಿ ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.
ಚಿತ್ರದುರ್ಗದ ರೇಣುಕಾಸ್ವಾಮಿ ಅವರು ಪವಿತ್ರಾ ಗೌಡ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪೋಸ್ಟ್ ಮಾಡಿದ್ದರು.
ಈ ಪೋಸ್ಟ್ ಮಾಡಿದ ನಂತರ ರೇಣುಕಾಸ್ವಾಮಿ ಅವರನ್ನು ಜೂನ್ 9 ಭಾನುವಾರ ಹತ್ಯೆ ಮಾಡಿ ಮೋರಿಗೆ ಎಸೆಯಲಾಗಿತ್ತು.
ಈ ಪ್ರಕರಣ ಪವಿತ್ರ ಗೌಡರಿಗೆ ಸಂಬಂಧಿಸಿದ್ದು ಅವರೇ ಮೊದಲ ಆರೋಪಿ.ಹಾಗಾಗಿ ಅವರನ್ನೂ ಪೊಲೀಸರು ಬಂಧಿಸಿ ಉಳಿದ ಆರೋಪಿಗಳೊಂದಿಗೆ ನ್ಯಾಧೀಶರ ಮುಂದೆ ಹಾಜರು ಪಡಿಸಿದರು.
ಎರಡೂ ಕಡೆ ಮನವಿ ಆಲಿಸಿದ ನ್ಯಾಯಾಧೀಶರಾದ ವಿಶ್ವನಾಥ ಗೌಡರ್ ಅವರು ಪ್ರಕರಣದ ಗಂಭೀರತೆ ಯನ್ನು ಅರಿತು ಎಲ್ಲಾ 13 ಮಂದಿಯನ್ನೂ ಪೊಲೀಸ್ ಕಸ್ಟಡಿಗೆ ನೀಡಿದರು.