ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ದರ್ಶನ್‌ಗೆ ಮತ್ತೊಂದು ಕಂಟಕ ಎದುರಾಗಿದೆ.
ಬೆಂಗಳೂರಿನ ಆರ್ ಆರ್ ನಗರದ ಐಡಿಯಲ್ ಹೋಮ್ಸ್‌ನಲ್ಲಿರುವ ದರ್ಶನ್ ಮನೆ ತೂಗುದೀಪ ನಿವಾಸಕ್ಕೆ ಸಂಚಕಾರ ಎದುರಾಗಲಿದೆ.
2016ರಲ್ಲಿ ರಾಜ ಕಾಲುವೆ ಒತ್ತುವರಿ ತೆರವಿಗೆ ಸರ್ಕಾರ ಸೂಚಿಸಿತ್ತು. ಒತ್ತುವರಿ ಮಾಡಿಕೊಂಡ ಕಟ್ಟಡಗಳ ಪಟ್ಟಿ ಮಾಡಿ ಬಿಬಿಎಂಪಿ ಬಿಡುಗಡೆ ಮಾಡಿತ್ತು,ಪರಿಶೀಲನೆ ವೇಳೆ ರಾಜಕಾಲುವೆಯ ಬಫರ್ ಝೋನ್ ಮೇಲೆ ದರ್ಶನ್ ನಿವಾಸ ನಿರ್ಮಾಣವಾಗಿರುವುದು ಬೆಳಕಿಗೆ ಬಂದಿತ್ತು.
ಹಾಗಾಗಿ ಬಿಬಿಎಂಪಿ ಒತ್ತುವರಿ ತೆರವು ಕಾರ್ಯಾಚರಣೆ ಪ್ರಾರಂಭಿಸಿತ್ತು.ಆಗ ದರ್ಶನ್ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು.
ಇದೀಗ ಬಿಬಿಎಂಪಿ ಮತ್ತೆ ನೋಟೀಸ್ ನೀಡಿ ತೂಗುದೀಪ ನಿವಾಸ ತೆರವುಗೊಳಿಸಲು ಮುಂದಾಗಿದೆ.