ಸೂರಜ್‌ ರೇವಣ್ಣ ಪ್ರಕರಣ ವಿಚಿತ್ರ, ವಿಕೃತ: ಪ್ರಿಯಾಂಕ್ ಖರ್ಗೆ

ಕಲಬುರಗಿ: ಸೂರಜ್‌ ರೇವಣ್ಣ ಪ್ರಕರಣ ವಿಚಿತ್ರ, ವಿಕೃತ, ಅಸಹ್ಯಪಡುವ ಪ್ರಕರಣ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬೇಸರ ಪಟ್ಟಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ,ಈ
ಪ್ರಕರಣದ ಬಗ್ಗೆ ಏನು ಮಾತನಾಡಬೇಕು ಅಂತ ಗೊತ್ತಾಗ್ತಿಲ್ಲ ಎಂದು ಹೇಳಿದರು.

ಇವೆಲ್ಲಾ ವಿಚಿತ್ರ, ವಿಕೃತ, ಅಸಹ್ಯ ಪಡುವ ಪ್ರಕರಣಗಳು, ಪ್ರಕರಣ ಯಾವುದೇ ಆಗಿರಬಹುದು, ಯಾರು ಮಾಡಿದ್ದಾರೊ ಅವರಿಗೂ ಏನು ಅನ್ನಿಸುತ್ತಿಲ್ಲವೆ,ಕಿನೆಪಕ್ಷ ಆತ್ಮಾವಲೋಕನ ಮಾಡಿಕೊಳ್ಳತ್ತಿಲ್ಲ ಎಂದು ತಿಳಿಸಿದರು.

ಈ ಕಳಂಕ ಅಳಿಸುವತನಕ ಅಧಿಕಾರ ಬಿಟ್ಟಿರುತ್ತೇವೆ ಅಂತ ಹೇಳ್ತಾರಾ,ಇಲ್ಲಾ. ಕುಮಾರಸ್ವಾಮಿ, ದೇವೆಗೌಡ, ರೇವಣ್ಣ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರ ಆತ್ಮಸಾಕ್ಷಿಗೆ ತಿಳಿದಂತೆ ಅವರು ಕೆಲಸ ಮಾಡಬೇಕು ಎಂದು ಹೇಳಿದರು.

ಆದರೆ ಇಷ್ಟೆಲ್ಲಾ ಆದರೂ ಬಿಜೆಪಿಯವರ ಮೌನ ಯಾಕೆ ಅಂತಾ ಗೋತ್ತಾಗ್ತಿಲ್ಲ. ಉಳಿದ ಸಮಯದಲ್ಲಿ ನ್ಯಾಯದ ಬಗ್ಗೆ ಮಾತಾಡುವ ಬಿಜೆಪಿಯವರು ಈಗ ಮೌನ ವಹಿಸಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.