ಬೆಂಗಳೂರು: ಎಲ್ಲದರ ಬೆಲೆ ಏರಿದ್ದಾಯಿತು, ಈಗ ನಂದಿನಿ ಹಾಲಿನ ಸರದಿ, ಟೀ,ಕಾಫಿ ಪ್ರಿಯರಿಗೆ ತುಟಿ ಸುಡುವುದು ಗ್ಯಾರಂಟಿ.
ನಂದಿನಿ ಅರ್ಧ ಲೀಟರ್ ಹಾಲಿನ ದರ 22ರಿಂದ 24 ರೂ.ಗೆ ಏರಿಕೆಯಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್ ತಿಳಿಸಿದ್ದಾರೆ.
ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಭೀಮಾನಾಯಕ್, ಒಂದು ಲೀಟರ್ ನಂದಿನಿ ಹಾಲಿನ ಪ್ಯಾಕೆಟ್ ಗೆ 50 ಎಂಎಲ್ ಹಾಲು ಹೆಚ್ಚುವರಿಯಾಗಿ ಸೇರಿಸಲಾಗುವುದು ಎಂದು ಹೇಳಿದರು.
ಲೀಟರ್ ಹಾಲಿಗೆ 42 ರೂಪಾಯಿ ಇರುವ ದರವನ್ನು 2 ರೂಪಾಯಿ ಹೆಚ್ಚಳ ಮಾಡಲಾಗುವುದು,ಜೂ.26 ರಿಂದಲೇ ಈ ದರ ಅನ್ವಯವಾಗಲಿದೆ ಎಂದು ತಿಳಿಸಿದರು.
ಹಾಲಿನ ದರ ಮಾತ್ರ ಏರಿಕೆ ಮಾಡುತ್ತಿದ್ದೇವೆ ಮೊಸರು, ಇನ್ನಿತರ ಯಾವುದೇ ಹಾಲಿನ ಉತ್ಪನ್ನಗಳ ದರ ಏರಿಕೆ ಮಾಡುವುದಿಲ್ಲ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದರು.
ನೆರೆಯ ಕೇರಳದಲ್ಲಿ ಒಂದು ಲೀಟರ್ ಹಾಲಿನ ಬೆಲೆ 52 ರುಪಾಯಿ ಇದೆ. ಗುಜರಾತ್ ನಲ್ಲಿ ಅಮುಲ್ ಒಂದು ಲೀಟರ್ ಗೆ 56 ರೂ. ಮಹಾರಾಷ್ಟ್ರದಲ್ಲಿ 56 ರೂ. ದೆಹಲಿ ಮದರ್ ಡೈರಿಯ ಹಾಲಿನ ಬೆಲೆ 54 ರೂ. ಇದೆ ಎಂದು ಭೀಮಾನಾಯ್ಕ್ ವಿವರಿಸಿ ನಮ್ಮಲ್ಲಿ ಇನ್ನೂ ಕಡಿಮೆಯೇ ಎಂದು ಸಮಜಾಯಿಷಿ ನೀಡಿದರು ಭೀಮಾನಾಯಕ್.
ಕೆಎಂಎಫ್ ಎಂಡಿ ಎಂ.ಕೆ ಜಗದೀಶ್, ಆಡಳಿತ ಮಂಡಳಿ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕೆಎಂಎಫ್ ಏನೋ ಹಾಲಿನ ದರ ಏರಿಕೆ ಮಾಡಿದೆ,ಆದರೆ ಸರ್ಕಾರ ಇದಕ್ಕೆ ಒಪ್ಪಿಗೆ ಕೊಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
ಟೋನ್ಡ್ ಹಾಲು
550 ಎಂಎಲ್ – 24 ರೂ.
1050 ಎಂಎಲ್ – 44 ರೂ.
ಹೋಮೋಜಿನೈಸ್ಡ್ ಟೋನ್ಡ್ ಹಾಲು
550 ಎಂಎಲ್ – 24 ರೂ.
1050 ಎಂಎಲ್ – 45 ರೂ.
ಹೋಮೋಜಿನೈಸ್ಡ್ ಹಸುವಿನ ಹಾಲು
550 ಎಂಎಲ್ – 26 ರೂ.
1050 ಎಂಎಲ್ – 48 ರೂ.
ಸ್ಪೆಷಲ್ ಹಾಲು
550 ಎಂಎಲ್ – 27 ರೂ.
1050 ಎಂಎಲ್ – 50 ರೂ.
ಶುಭಂ ಹಾಲು
550 ಎಂಎಲ್ – 27 ರೂ.
1050 ಎಂಎಲ್ – 50 ರೂ.
ಸಮೃದ್ಧಿ ಹಾಲು
550 ಎಂಎಲ್ – 28 ರೂ.
1050 ಎಂಎಲ್ – 53 ರೂ.
ಹೋಮೋಜಿನೈಸ್ಡ್ ಶುಭಂ ಹಾಲು
550 ಎಂಎಲ್ – 27 ರೂ.
1050 ಎಂಎಲ್ – 51 ರೂ.
ಸಂತೃಪ್ತಿ ಹಾಲು
550 ಎಂಎಲ್ – 30 ರೂ.
1050 ಎಂಎಲ್ – 57 ರೂ.
ಶುಭಂ ಗೋಲ್ಡ್ ಹಾಲು
550 ಎಂಎಲ್ – 28 ರೂ.
1050 ಎಂಎಲ್ – 51 ರೂ.
ಡಬಲ್ ಟೋನ್ಡ್ ಹಾಲು
550 ಎಂಎಲ್ – 23 ರೂ.
1050 ಎಂಎಲ್ – 43 ರೂ.