ಸರ್ಕಾರ ಬೌದ್ಧ ಸಮುದಾಯದ ಜತೆ ಇರಲಿದೆ -ಜಮೀರ್

ಮೈಸೂರು: ರಾಜ್ಯ ಸರ್ಕಾರ ಬೌದ್ಧ ಸಮುದಾಯದ ಜತೆ ಇರಲಿದೆ,ಅವರ ಬೇಡಿಕೆಗಳಿಗೂ ಸ್ಪಂದಿಸಲಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ಮೈಸೂರಿನ ಸರಸ್ವತಿಪುರಂ ನಲ್ಲಿ ಮಹಾಬೋಧಿ ಮೈತ್ರಿ ಮಂಡಲವು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಯಿಂದ ನೀಡಲಾದ ಒಂದು ಕೋಟಿ ರೂ. ಅನುದಾನದಲ್ಲಿ ನಿರ್ಮಿಸಿರುವ  ಸಮುದಾಯ ಭವನ ಉದ್ಘಾಟಿಸಿ ಸಚಿವರು ಮಾತನಾಡಿದರು.

ಬೌದ್ಧ ಸಮುದಾಯದವು ರಾಜ್ಯದಲ್ಲಿ ನೆಲೆಸಿರುವುದರ ಜತೆಗೆ ಶಿಕ್ಷಣ ಕ್ಷೇತ್ರದಲ್ಲೂ ಉತ್ತಮ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಣ ಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಯಾವುದೇ ರೀತಿಯ ನೆರವು ನೀಡಲು ಸಿದ್ದ ಎಂದು ಜಮೀರ್ ಭರವಸೆ ನೀಡಿದರು.

ಇದೇ ವೇಳೆ ಮಹಾಬೋಧಿ ಮೈತ್ರಿಮಂಡಲದ ಸರಸ್ವತಿ ಪುರಂ, ಹುಣಸೂರು, ಬೈಲಕುಪ್ಪೆ, ಟಿ ನರಸೀಪುರ ಶಾಖೆ ಗಳ ಶಿಕ್ಷಣ ಸಂಸ್ಥೆ ಕಟ್ಟಡ ನಿರ್ಮಾಣ ಹಾಗೂ ಇತರೆ ಸೌಲಭ್ಯಕ್ಕೆ ನೀಡಲಾದ 1.62 ಕೋಟಿ ರೂ. ಅನುದಾನದ ಚೆಕ್ ಅನ್ನು ಸಚಿವರು ಖುದ್ದು ಆನಂದ ಬಂತೇಜಿ ಅವರಿಗೆ ಹಸ್ತಾಂತರ ಮಾಡಿದರು.

ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಕ್ಕಾಗಿ ಅಗತ್ಯ ವಾದ ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಖರೀದಿಸಲು 2 ಲಕ್ಷ ರೂಗಳನ್ನು  ಸಚಿವರು ವೈಯಕ್ತಿಕ ವಾಗಿ ನೀಡಿದರು.

ಎನ್ ಸಿಸಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಪಡೆಯಲು ಇಲಾಖೆಯಿಂದ ನೆರವು ಕೊಡಿಸುತ್ತೇನೆ, ಸಾಧ್ಯವಾಗದಿದ್ದರೆ ವೈಯಕ್ತಿಕ ವಾಗಿ ನೀಡುತ್ತೇನೆ ಎಂದು ಜಮೀರ್ ಅಹಮದ್ ಖಾನ್ ಆಶ್ವಾಸನೆ ನೀಡಿದರು.

ಇದೇ ಸಂದರ್ಭದಲ್ಲಿ ಸಚಿವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಆನಂದ ಬಂತೇಜಿ, ಇತ್ತೀಕಾ ಮಹಾಧೀರಾ, ಸಿದ್ದಾರ್ಥ್ ವಾಟ್ಸಾಯನ್ ಉಪಸ್ಥಿತರಿದ್ದರು.

ನಂತರ ಸಚಿವ ಜಮೀರ್ ಅಹಮದ್ ಖಾನ್, ಹುಣಸೂರು ಗುರು ಪುರ ಕ್ಯಾಂಪ್ ನ ಗುಡ್ ಮೆಡ್ ತಾಂತ್ರಿಕ ವಿಶ್ವವಿದ್ಯಾಲಯ ಸೊಸೈಟಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಯಲ್ಲಿ ಪಾಲ್ಗೊಂಡು ಅಲ್ಲಿನ ಬೌದ್ಧ ಬಿಕ್ಕುಗಳೊಂದಿಗೆ ಸಂವಾದ ನಡೆಸಿ ಫೋಟೋ ಸೆಷನ್ ಮಾಡಿದರು.