ಮೈಸೂರು: ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಕೆಲ ಮಳಿಗೆಗಳ ಮೇಲೆ ದಿಢೀರ್ ದಾಳಿ ಮಾಡಿ ಸಾವಿರಾರು ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ.
ಸೋಮವಾರ ಬೆಳ್ಳಂ ಬೆಳಿಗ್ಗೆ ನಗರದ ವಲಯ ಕಚೇರಿ 1ರ ವ್ಯಾಪ್ತಿಯ ವಾರ್ಡ್ ನಂಬರ್ 51ರ ಹರಿಶ್ಚಂದ್ರ ರಸ್ತೆಯಲ್ಲಿ ದಾಳಿ ನಡೆಸಲಾಯಿತು.
ಬಹು ದಿನಗಳಿಂದ ನಾನ್ ವೋವೆನ್ ಪ್ರಿಂಟ್ ಬ್ಯಾಗ್ ಗಳನ್ನು ಮುದ್ರಿಸುತ್ತಿದ್ದ ಆರಂಭ ಎಂಬ ಮಳಿಗೆಗೆ ನಗರ ಪಾಲಿಕೆ ಆಯುಕ್ತ
ಆಶಾದ್ ಉರ್ ರಹಮಾನ್ ಶರೀಫ್ ಮತ್ತು ಅಧಿಕಾರಿಗಳು ದಿಢೀರ್ ಭೇಟಿ ನೀಡಿದರು.
ಈ ವೇಳೆ ಪರಿಶೀಲಿಸಿ 3710 ಕೆ ಜಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ.
ಸಹಾಯಕ ಆಯುಕ್ತ ಮಂಜುನಾಥ್ ರೆಡ್ಡಿ, ಪಾಲಿಕೆ ಆರೋಗ್ಯ ಅಧಿಕಾರಿ ವೆಂಕಟೇಶ್, ಸಹಾಯಕ ಕಾರ್ಯಪಲಕ ಅಭಿಯಂತರರಾದ ಮಧುಕರ್, ಮೀನಾಕ್ಷಿ, ಪರಿಸರ ಅಭಿಯಂತರರಾದ ಜ್ಯೋತಿ, ಹಿರಿಯ ಆರೋಗ್ಯ ನಿರೀಕ್ಷಕ ಶಿವಪ್ರಸಾದ್, ಕಿರಿಯ ಆರೋಗ್ಯ ನಿರೀಕ್ಷಕರಾದ ಪ್ರೀತಿ, ಶೋಭಾ, ಹಿರಿಯ ಪರಿಸರ ಅಧಿಕಾರಿ ಹರಿಶಂಕರ್, ಪರಿಸರ ಅಧಿಕಾರಿ ಜಯಲಕ್ಷ್ಮಿ ಮತ್ತಿತರರು ಹಾಜರಿದ್ದರು.