ಎಲ್ಲಾ ಪ್ರಕರಣ ಸಿಬಿಐಗೆ ಕೊಡಲಾಗಲ್ಲ ಪರಮೇಶ್ವರ್

ಬೆಂಗಳೂರು: ಮುಡಾ ಹಗರಣ ಕುರಿತು ವೆರಿಫೈ ನಡೆಯಿತ್ತಿದೆ, ಎಲ್ಲವನ್ನೂ ಸಿಬಿಐಗೆ ಕೊಡಲು ಸಾಧ್ಯವಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿಜೆಪಿಯವರು ಕೇಳ್ತಾರೆ ಅಂತಾ ಎಲ್ಲವನ್ನೂ ಸಿಬಿಐಗೆ ಕೊಡಲು ಆಗೋದಿಲ್ಲ ಎಂದು ಹೇಳಿದರು.

ಈ ಬಗ್ಗೆ ಮುಖ್ಯ ಮಂತ್ರಿಗಳು ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ, ಎಲ್ಲವನ್ನೂ ಸಿಬಿಐ ತನಿಖೆಗೆ ಕೊಟ್ರೆ ಇಲ್ಲೇನೂ ಮಾಡೋ ಹಾಗಿಲ್ವಾ ಎಂದು ಪ್ರಶ್ನಿಸಿದರು.

ಅಸೆಂಬ್ಲಿಯಲ್ಲಿ ಅವರು ಯಾವ ವಿಷಯ ಚರ್ಚೆಗೆ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ, ಸ್ಪೀಕರ್ ಗೆ ಯಾವ ವಿಚಾರದ ಬಗ್ಗೆ ಲೆಟರ್ ಕೊಡುವರೊ ನೋಡಬೇಕು,ಆದರೆ ಬಿಜೆಪಿಯವರಿಗೆ ನಾವು ಉತ್ತರ ಕೊಡುತ್ತೇವೆ ನಾವು ಹಿಂಜರಿವುದಿಲ್ಲ ಎಂದು ಪರಮೇಶ್ವರ್  ತಿಳಿಸಿದರು.